ರಾಮೇಶ್ವರ, ಆ. 22 (DaijiworldNews/HR): ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿಗಳು ಭಾರತೀಯ ಮೀನುಗಾರಿಕೆ ದೋಣಿಗಳಿಗೆ ಕಲ್ಲು ತೂರಾಟದಿಂದ ಸುಮಾರು 60 ದೋಣಿಗಳು ಹಾನಿಗೀಡಾಗಿವೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಶ್ರೀಲಂಕಾದ ನೌಕಾ ಸಿಬ್ಬಂದಿಗಳು ಸುಮಾರು ಐದು ಹಡಗುಗಳಲ್ಲಿ ಬಂದಿದ್ದು, ಭಾರತೀಯ ದೋಣಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಈ ದಾಳಿಯಲ್ಲಿ ಯಾವುದೇ ಮೀನುಗಾರರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಮೀನುಗಾರರ ಸಂಘದ ಪ್ರತಿನಿಧಿ ಎಸ್. ಎಮೆರಿಟ್ ಮಾಹಿತಿ ನೀಡಿದ್ದು, "ಶನಿವಾರ ರಾತ್ರಿ ಸುಮಾರು 556 ದೋಣಿಗಳೊಂದಿಗೆ ಮೀನುಗಾರರು ಸಮುದ್ರಕ್ಕೆ ಇಳಿದಿದ್ದು, ಅವುಗಳಲ್ಲಿ ಕೆಲವು ಶ್ರೀಲಂಕಾ ನೌಕಾ ಪಡೆಯ ದಾಳಿಗೆ ಗುರಿಯಾಗಿವೆ" ಎಂದಿದ್ದಾರೆ.