ನವದೆಹಲಿ, ಆ 22 (DaijiworldNews/PY): ಮಣಿಪುರದ ನೂತನ ರಾಜ್ಯಪಾಲರಾಗಿ ತಮಿಳುನಾಡಿನ ಬಿಜೆಪಿ ಹಿರಿಯ ನಾಯಕ ಲ. ಗಣೇಶ್ ಅವರನ್ನು ನೇಮಕಗೊಂಡಿದ್ದಾರೆ.
ಈ ಬಗ್ಗೆ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದು, ಆಗಸ್ಟ್ 10ರಂದು ನಿವೃತ್ತರಾದ ರಾಜ್ಯಪಾಲ ನಜ್ಮಾ ಹೆಪ್ತುಲ್ಲಾ ಅವರ ಸ್ಥಾನಕ್ಕೆ ನೂತನ ರಾಜ್ಯಪಾಲರನ್ನಾಗಿ ಲ. ಗಣೇಶ್ ಅವರನ್ನು ನೇಮಕ ಮಾಡಿದ್ದಾರೆ.
ಹೆಪ್ತುಲ್ಲಾ ಅವರು ಆಗಸ್ಟ್ 10ರಂದು ಕಚೇರಿ ತೊರೆದಿದ್ದು, ಅದೇ ದಿನ ಸಿಕ್ಕಿಂ ಗವರ್ನರ್ ಗಂಗಾ ಪ್ರಸಾದ್ ಅವರಿಗೆ ಉಸ್ತುವಾರಿ ನೀಡಲಾಗಿತ್ತು. ಇದೀಗ್ ಲ. ಗಣೇಶ್ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಈ ಕುರಿತು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.