ವಿಜಯಪುರ,ಆ. 22 (DaijiworldNews/HR): ರಾಜಕಾರಣಿಗಳ ಸಭೆ-ಸಮಾರಂಭ, ಸಚಿವರ ಸಂಭ್ರಮಾಚರಣೆಗಳಿಗೆ ಇಲ್ಲದ ಕೊರೊನಾ ನಿಯಮಗಳನ್ನು ಗಣೇಶ ಹಬ್ಬ ಆಚರಿಸಲು ಮಾಡುವುದು ಏಕೆ ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸಾವಿರಗಟ್ಟಲೇ ಜನರನ್ನು ಸೇರಿಸಿ ನೀವು ಸಭೆ ಮಾಡುತ್ತಿದ್ದೀರ. ಗಣೇಶೋತ್ಸವ ಆಚರಣೆಗೆ ಮಾತ್ರ 50 ಕಂಡಿಷನ್ ಹಾಕಿದ್ದಾರೆ. ಗಣಪತಿ ಹಬ್ಬ ಬಂದಾಗ ಮಾತ್ರ ಕೊರೊನಾ ನೆನಪಾಗುತ್ತಾ? ಈ ಬಗ್ಗೆ ನಾನು ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಮಾತನಾಡಿದ್ದೇನೆ" ಎಂದರು.
ಇನ್ನು ಗಣೇಶೋತ್ಸವ ಆಚರಿಸಲು ಯಾರೂ ಕೊರೊನಾಗೆ ಹೆದರಬೇಕಿಲ್ಲ. ಧಾರ್ಮಿಕ ಆಚರಣೆ ಅದರಲ್ಲೂ ಗಣೇಶ ಹಬ್ಬ ಆಚರಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.