ನವದೆಹಲಿ, ಆ. 22 (DaijiworldNews/HR): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ಸೇನೆಯನ್ನು ಗಡಿಗೆ ಕಳುಹಿಸಿದ್ದರಿಂದ 2020ರಲ್ಲಿ ಪೂರ್ವ ಲಡಾಖ್ನಿಂದ ಚೀನಾ ಹೆಜ್ಜೆ ಹಿಂದೆ ಹಾಕಿತು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಭಾರತೀಯ ಸೇನೆಯ ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, "2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಗಡಿಯಲ್ಲಿ ಶತ್ರು ರಾಷ್ಟ್ರಗಳು ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ನೇರವಾಗಿ ಸಮರ್ಥ ಪ್ರತಿಕ್ರಿಯೆ ನೀಡಲು ಸಶಸ್ತ್ರ ಪಡೆಗೆ ನಿರ್ದೇಶಿಸಲಾಗಿದೆ" ಎಂದರು.
ಇನ್ನು "ಚೀನಾವು ಎದುರಾದಾಗ, ಮೋದಿ ಸಂಪೂರ್ಣ ಸೇನೆಯನ್ನು ಗಡಿಗೆ ಕಳುಹಿಸಿ ಹೆಜ್ಜೆ ಹಿಂದಿಡುವಂತೆ ಮಾಡಿದರು. ಜನರು ಭಾರತೀಯ ಸೇನೆಯ ಬಗ್ಗೆ ಹೆಚ್ಚು ಮಾತನಾಡಿದರು. ಆದರೆ ಸಶಸ್ತ್ರ ಪಡೆಗಳಿಗೆ ಎದುರಾಗಿ ನಿಲ್ಲುವಂತೆ ಸಂದೇಶ ನೀಡಿದ್ದು ನರೇಂದ್ರ ಮೋದಿ" ಎಂದು ಹೇಳಿದ್ದಾರೆ.