ಹುಬ್ಬಳ್ಳಿ, ಆ 22 (DaijiworldNews/PY): "ನಾನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಏನೂ ಮಾತನಾಡುವುದಿಲ್ಲ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ತಮ್ಮ ನಿವಾಸದ ಎದುರು ಮಾತನಾಡಿದ ಅವರು, ಗುಂಡು ಹಾಕಿದರೂ ಸಾರ್ವಜನಿಕ ಗಣೇಶ ಚತುರ್ಥಿ ಆಚರಿಸುತ್ತೇನ ಎಂದ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. "ನಾನು ಯತ್ನಾಳ್ ಬಗ್ಗೆ ಏನೂ ಹೇಳುವುದಿಲ್ಲ. ಆ ಬಗ್ಗೆ ಅವರನ್ನೇ ಕೇಳಿ" ಎಂದಿದ್ದಾರೆ.
"ಸೆ.3ರಂದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ, ನಾನು ಹೆಚ್ಚು ಏನೂ ಮಾತನಾಡುವುದಿಲ್ಲ. ಜಾತಿಗಣತಿ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಧಾನಿಗಳ ಭೇಟಿಗೆ ವಿರೋಧ ಪಕ್ಷಗಳ ನಿಯೋಗ ಮುಂದಾಗಿರುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಸದ್ಯ ಈ ವಿಚಾರ ನ್ಯಾಯಾಲಯದಲ್ಲಿದೆ. ಅವರಿಗೆ ಪ್ರಧಾನಿಗಳ ಭೇಟಿ ಮಾಡಲು ಅವಕಾಶ ಇದೆ, ಅವರು ಭೇಟಿ ಮಾಡಲಿ" ಎಂದು ತಿಳಿಸಿದ್ದಾರೆ.