ಬಳ್ಳಾರಿ, ಆ. 22 (DaijiworldNews/HR): ತಾಕತ್ ಇದ್ದರೆ ಬಳ್ಳಾರಿಗೆ ಬನ್ನಿ ನೋಡೋಣ ಎಂದು ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಾರ್ದನ ರೆಡ್ಡಿ ಅವರಿಗೆ ಹಾಕಿದ್ದ ಸವಾಲಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.
ಜೈಲಿನಿಂದ ಬಿಡುಗಡೆಗೊಂಡು ಜನಾರ್ದನ ರೆಡ್ಡಿ ಅವರು ಮತ್ತೆ ಬಳ್ಳಾರಿಗೆ ಬರ್ತಿದ್ದಂತೆ ಹಳೆಯ ವಿಡಿಯೋವನ್ನು ಮತ್ತೆ ಶೇರ್ ಮಾಡುತ್ತಿದ್ದಾರೆ.
2010ರಲ್ಲಿ ನಡೆದ ವಿಧಾನಸಭೆ ಕಲಾಪದ ವೇಳೆ ಸಿದ್ದರಾಮಯ್ಯಗೆ ತಾಕತ್ತಿದ್ದರೆ ಬಳ್ಳಾರಿಗೆ ಬಾ ನೋಡಿಕೊಳ್ಳುತ್ತೇವೆ ಎಂದು ರೆಡ್ಡಿ ಬ್ರದರ್ಸ್ ತೊಡೆ ತಟ್ಟಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿದ ಸಿದ್ದರಾಮಯ್ಯ ಪಾದಯಾತ್ರೆ ಮೂಲಕ ಬಳ್ಳಾರಿಗೆ ಬಂದಿದ್ದರು.
ಇನ್ನು ಅಕ್ರಮ ಗಣಿಗಾರಿಕೆಯಲ್ಲಿ ರೆಡ್ಡಿ ಜೈಲು ಸೇರಿದ್ದು, ಅಲ್ಲದೆ ಬಳ್ಳಾರಿಗೆ ಬರದಂತೆ ಕೋರ್ಟ್ ಷರತ್ತು ಕೂಡ ವಿಧಿಸಿತ್ತು. ಬಳಿಕ ಚುನಾವಣೆ ಪ್ರಚಾರಕ್ಕೆ ಬಂದಿದ್ದಾಗ ಸಿದ್ದು ನನಗೆ ತಾಕತ್ ಇದ್ರೆ ಬಳ್ಳಾರಿಗೆ ಬಾ ಅಂತಿದ್ದ ರೆಡ್ಡಿ, ಈಗ ನೀನಗೆ ತಾಕತ್ ಇದ್ರೆ ಬಳ್ಳಾರಿ ಗೆ ಬಾ ಎಂದಿದ್ದರು.