ನವದೆಹಲಿ, ಆ 22 (DaijiworldNews/PY): ದೇಶಾದ್ಯಂತ ಅಣ್ಣ-ತಂಗಿಯರ ಪವಿತ್ರ ಹಬ್ಬವಾದ ರಕ್ಷಾ ಬಂಧನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಶುಭ ಕೋರಿರುವ ಅವರು, "ರಕ್ಷಾ ಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳುಗೆ ಶುಭಾಶಯಗಳು" ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದು, "ಎಲ್ಲಾ ದೇಶವಾಸಿಗಳಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು" ಎಂದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, "ನಾಡಿನ ಸಮಸ್ತ ಜನತೆಗೆ ಸಾಮರಸ್ಯ ಹಾಗೂ ಸಹೋದರತ್ವದ ಪ್ರತೀಕವಾದ ಪವಿತ್ರ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ತರಲಿಯೆಂದು ಹಾರೈಸುತ್ತೇನೆ" ಎಂದು ತಿಳಿಸಿದ್ದಾರೆ.
"ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು! ನೀವೂ ಕೂಡ ನಿಮ್ಮ ಸಹೋದರ-ಸಹೋದರಿಯರೊಂದಿಗೆ ಈ ದಿನವನ್ನು ಆಚರಿಸುತ್ತಿದ್ದೀರೆಂಬ ವಿಶ್ವಾಸ ನನ್ನದು" ಎಂದು ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದು, "ರಕ್ಷಾ ಬಂಧನದ ಶುಭಾಕಾಂಕ್ಷೆಗಳು. ರಕ್ಷಾ ಬಂಧನ ಹಬ್ಬವು ಅಣ್ಣ-ತಂಗಿಯರ ನಡುವಿನ ಪ್ರೀತಿ ಹಾಗು ಗೌರವದ ವಿಶೇಷ ಮತ್ತು ಆಳವಾದ ಬಾಂಧವ್ಯದ ಸಂಭ್ರಮಾಚರಣೆ. ಈ ಪವಿತ್ರ ದಿನದಂದು ಮಹಿಳೆಯರ ಘನತೆ ಎತ್ತಿ ಹಿಡಿಯುವ ಮತ್ತು ಅವರಿಗೆ ಸದಾ ಗೌರವ ಹಾಗು ಸುರಕ್ಷಿತ ವಾತಾವರಣ ಕಲ್ಪಿಸುವ ಸಂಕಲ್ಪ ಮಾಡೋಣ" ಎಂದಿದ್ದಾರೆ.