ಲಕ್ನೋ, ಆ 22 (DaijiworldNews/PY): ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರಪ್ರದೇಶದ ಮಾಜಿ ಸಿಎಂ ಹಾಗೂ ಬಿಜೆಪಿಯ ಹಿರಿಯ ನಾಯಕ ಕಲ್ಯಾಣ್ ಸಿಂಗ್ (89) ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಕಲ್ಯಾಣ್ ಸಿಂಗ್ ಅವರನ್ನು ಜುಲೈ 4ರಂದು ಅಂಜಯ್ ಗಾಂಧಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಸೆಪ್ಸಿಸ್ ಹಾಗೂ ಬಹು ಅಂಗಾಗ ವೈಫಲ್ಯದಿಂದ ಅವರು ನಿಧನರಾದರು ಎಂದು ಆಸ್ಪತ್ರೆಯ ಹೇಳಿಕೆಯಲ್ಲಿ ತಿಳಿಸಿದೆ.
ಕಲ್ಯಾಣ್ ಸಿಂಗ್ ಅವರು 1991, ಜೂನ್ನಿಂದ 1992 ಡಿಸೆಂಬರ್ವರೆಗೆ ಹಾಗೂ ಸೆಪ್ಟೆಂಬರ್ನಿಂದ 1999 ನವೆಂಬರ್ವರೆಗೆ ಎರಡು ಬಾರಿ ಉತ್ತರ ಪ್ರದೇಶದ ಸಿಎಂ ಆಗಿದ್ದರು.
ಇವರು ರಾಜಸ್ಥಾನದ ರಾಜಪಾಲರಾಗಿಯೂ ಸೇವೆ ಸಲ್ಲಿಸಿದ್ದರು.