ಡೆಹ್ರಾಡೂನ್, ಆ 21 (DaijiworldNews/PY): "ದೇಶವು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸುರಕ್ಷಿತವಾಗಿದೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಿಳಿಸಿದ್ದಾರೆ.
ರಾಯ್ವಾಲಾದಲ್ಲಿ ನಡೆದ ಸೈನಿಕ ಸಮ್ಮಾನ್ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, "ದೇಶವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಲಿಷ್ಠ, ಸುರಕ್ಷಿತ ಹಾಗೂ ವೇಗವಾಗಿ ಮುನ್ನಡೆಯಲು ಸಿದ್ದವಾಗಿದೆ" ಎಂದಿದ್ದಾರೆ.
"ಉತ್ತರಾಖಂಡವು ದೇವಭೂಮಿಯ ಹಾಗೂ ವೀರಭೂಮಿ. ಈ ಭಾಗದ ಪ್ರತಿಯೊಂದು ಮನೆಯಿಂದಲೂ ಜನರು ಸೇನೆಯನ್ನು ಪ್ರತಿನಿಧಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
"ರಕ್ಷಣಾ ಕ್ಷೇತ್ರವನ್ನು ಸುಧಾರಣೆ ಮಾಡುವಲ್ಲಿ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ವಿಫಲವಾಗಿದೆ. ದೇಶದ ರಕ್ಷಣಾ ಬಜೆಟ್ 2011-12ರಲ್ಲಿ 1,43,000 ಕೋಟಿ ರೂ. ಇತ್ತು. 2020-21ರಲ್ಲಿ ರಕ್ಷಣಾ ಬಜೆಟ್ 4,78,000 ಕೋಟಿ ರೂ. ಆಗಿದೆ" ಎಂದಿದ್ದಾರೆ.
"ಮೋದಿ ಸರ್ಕಾರವು, 1,35,000 ಕೋಟಿ ರೂ. ಮೊತ್ತದ ಹೊಸ ಶಸ್ತ್ರಾಸ್ತ್ರ ಖರೀದಿಗೆ ಸಿದ್ದತೆ ಮಾಡಿಕೊಂಡಿದ್ದು, ರಕ್ಷಣಾ ವಲಯವನ್ನು ಆಧುನೀಕರಣಗೊಳಿಸುವ ಭರವಸೆಯನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ" ಎಂದು ತಿಳಿಸಿದ್ದಾರೆ.