ಹೈದರಬಾದ್, ಆ 21 (DaijiworldNews/MS): ಆಂಧ್ರಪ್ರದೇಶ ಕಾಂಗ್ರೆಸ್ ಮಾಜಿ ಸಂಸತ್ ಸದಸ್ಯ ಜಿ.ವಿ. ಹರ್ಷ ಕುಮಾರ್ ಅವರ ಕಾಂಗ್ರೆಸ್ ನಾಯಕ ಜಿವಿ ಶ್ರೀ ರಾಜ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.
ರಾಜ್ಯ ಕಾಂಗ್ರೆಸ್ ಸಮಿತಿಯು ಅವರನ್ನು "ಪಕ್ಷದ ಮತ್ತು ರಾಹುಲ್ ಗಾಂಧಿಯ ಪ್ರತಿಷ್ಠೆಗೆ ಅಗೌರವ ತೋರಿದ ಕಾರಣಕ್ಕಾಗಿ ಅವರನ್ನು ಅಮಾನತುಗೊಳಿಸಿದೆ.
ಜಿವಿ ಶ್ರೀ ರಾಜ್ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ತಾತ್ಕಲಿಕವಾಗಿ ಅಮಾನತುಗೊಳಿಸಿದ್ದನ್ನು ವಿರೋಧಿಸಿ, ಟ್ವಿಟರ್ ಸಂಸ್ಥೆ ವಿರುದ್ದ, ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ "ಟ್ವಿಟ್ಟರ್ ಬರ್ಡ್ ಪ್ರೈ ಎಂಬ ಖಾದ್ಯ" ವನ್ನು ಕ್ವಿಲ್ ಹಕ್ಕಿಯನ್ನು ಹುರಿದು ತಯಾರಿಸಿದ್ದರು . ಬಳಿಕ ಅದನ್ನು ಮುಂಬೈನ ಟ್ವಿಟರ್ ಕಚೇರಿಗೆ ಕಳುಹಿಸಿದ್ದರು. ಅವರ ಪ್ರತಿಭಟನೆಯ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ಬಳಕ ನಂತರ ಅವರನ್ನು ಶುಕ್ರವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ದೆಹಲಿಯ 9 ವರ್ಷದ ಅತ್ಯಾಚಾರ ಸಂತ್ರಸ್ತೆಯ ಪೋಷಕರನ್ನು ಭೇಟಿ ಮಾಡುವ ಚಿತ್ರವನ್ನು ಪೋಸ್ಟ್ ಮಾಡಿದ ನಂತರ ಗಾಂಧಿಯವರ ಖಾತೆಯನ್ನು ಟ್ವಿಟರ್ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂತ್ರಸ್ತ ಕುಟುಂಬದ ಗುರುತನ್ನು ಬಹಿರಂಗಪಡಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಘಟನೆ ಬಳಕ ನಂತರ ಅವರನ್ನು ಶುಕ್ರವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ.