ನವದೆಹಲಿ, ಆ 21 (DaijiworldNews/PY): ಭಾರತೀಯ ವಾಯುಪಡೆಯ ಸಿ-130 ಜೆ ವಿಮಾನವು ಕಾಬೂಲ್ನಿಂದ 85 ಜನರೊಂದಿಗೆ ಶನಿವಾರ ಬೆಳಗ್ಗೆ ಕಾಬೂಲ್ನಿಂದ ಪ್ರಯಾಣ ಆರಂಭಿಸಿದೆ.
ವಿಮಾನವು ಕಾಬೂಲ್ನಿಂದ ಟೇಕಾಫ್ ಆದ ಬಳಿಕ ಇಂಧನ ತುಂಬಿಸಿಕೊಳ್ಳಲು ತಜಕಿಸ್ತಾನ್ನಲ್ಲಿ ಇಳಿದಿದೆ. ಕಾಬೂಲ್ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತೀಯ ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಭಾರತೀಯ ನಾಗರಿಕರನ್ನು ಸರ್ಕಾರ ಸಂಘಟಿಯ ಪ್ರಯತ್ನದೊಂದಿಗೆ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗುತ್ತಿದೆ. ಎರಡು ವಿಮಾನಗಳು ಅಮೇರಿಕಾ ಭದ್ರತಾ ಪಡೆಗಳಿಂದ ಕ್ಲಿಯರೆನ್ಸ್ ಪಡೆದುಕೊಂಡು ಕೆಲವು ಪತ್ರಕರ್ತರು ಸೇರಿದಂತೆ ಐಟಿಬಿಪಿ ಸಿಬ್ಬಂದಿಗಳು ಹಾಗೂ 180 ಅಧಿಕಾರಿಗಳನ್ನು ಭಾರತಕ್ಕೆ ವಾಪಾಸ್ಸು ಕರೆತಂದಿದ್ದವು.