ಶಿವಮೊಗ್ಗ, ಆ 21 (DaijiworldNews/PY): "ಅಫ್ಗಾನಿಸ್ತಾನದಲ್ಲಿರುವ ನಡೆಯುತ್ತಿರುವ ಘಟನೆಗಳು ಮನುಷ್ಯರು ತಲೆತಗ್ಗಿಸುವಂತಿದೆ. ಈ ರೀತಿಯಾದ ಘಟನೆಗಳನ್ನು ಕಂಡಾಗ ಪ್ರಪಂಚದಲ್ಲಿ ಮಾನವೀಯತೆ ಇಲ್ಲವೇನೋ ಎಂದೆನಿಸುತ್ತದೆ" ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಫ್ಗಾನ್ನಲ್ಲಿ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತಿದೆ. ಅಫ್ಗಾನ್ನಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳೂ ಕೆಟ್ಟದ್ದೆ. ಮನುಷತ್ವ ಇಲ್ಲದೇ ನಡೆಯುತ್ತಿರುವ ಈ ರೀತಿಯಾದ ಘಟನೆಗಳಿಗೆ ಯಾವೊಬ್ಬ ನಾಗರಿಕನೂ ಬೆಂಬಲಿಸಲು ಆಗದು" ಎಂದಿದ್ದಾರೆ.
"ಅಫ್ಗಾನ್ನಲ್ಲಿ ನಡೆಯುತ್ತಿರುವ ಘಟನೆಗಳನ್ನು ಕಂಡು ನಾವು ನಮ್ಮ ದೇಶದಲ್ಲಿ ಏನು ಒಳ್ಳೆಯದು ಮಾಡಬೇಕು ಎಂದು ನಿರ್ಧರಿಸಬೇಕು. ನಮ್ಮ ದೇಶದಲ್ಲಿ ಕೆಲವು ಮಂದಿ ವಿಚಾರವಾದಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಧರ್ಮ ಸಹಿಷ್ಣುತೆ, ಶಾಂತಿಪ್ರಿಯತೆ ಉತ್ತಮವಾಗಿದೆ. ಈ ವಿಚಾರವಾದಿಗಳು ತಾಲಿಬಾನ್ನ ದುಷ್ಕೃತ್ಯವನ್ನು ಖಂಡಿಸಲಿ" ಎಂದು ಹೇಳಿದ್ದಾರೆ.