ಜಮಖಂಡಿ, ಆ 21 (DaijiworldNews/MS): ಆಫ್ಟಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹಿಂಸಾಚಾರ ನಡೆಸುತ್ತಿರುವ ತಾಲಿಬಾಲ್ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಜಮಖಂಡಿಯಲ್ಲಿ ಶುಕ್ರವಾರ ನಡೆದಿದೆ.
ಆಶೀಫ್ ಗಲಗಲಿ ಬಂಧಿತ ಆರೋಪಿ. ಈತ ’ಐ ಲವ್ ತಾಲಿಬಾನ್' ಎಂದು ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು.
ಆಶೀಫ್ ಗಲಗಲಿ ತಾಲಿಬಾನ್ ಪರ ಹಾಕಿದ್ದ ಜನಕ್ರೋಶಕ್ಕೆ ಕಾರಣವಾಗಿದ್ದು ಆತನನ್ನು ಕೂಡಲೇ ಬಂಧಿಸಬೇಕೆಂದು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದರು.
ಶುಕ್ರವಾರ ಬೆಳಗ್ಗೆಯಿಂದ ಆರೋಪಿ ಪರಾರಿಯಾಗಿದ್ದ. ನಂತರ ಪೊಲೀಸರು ಆರೋಪಿಯನ್ನುಸಂಜೆ ಬಂಧಿಸಿರುವುದಾಗಿ
ತಿಳಿಸಿದ್ದಾರೆ. ಈತನ ವಿರುದ್ದ ಜಮಖಂಡಿ ಶಹರ ಪೊಲೀಸ್ ಠಾಣೆಯಲ್ಲಿ 295(ಎ), 505(2) 'ಮತೀಯಗಲಭೆ' ಮತ್ತು ಪ್ರಚಾರ ಪ್ರಕರಣ ದಾಖಲಾಗಿದೆ.