ಕೇರಳ, ಆ. 20 (DaijiworldNews/SM): ದೇಶದಲ್ಲೇ ಶೇ. 100 ರಷ್ಟು ಕೋವಿಡ್ ಲಸಿಕೆ ಹಾಕಿಕೊಂಡ ಜಿಲ್ಲೆ ಕೇರಳದ ವಯನಾಡ್ ಜಿಲ್ಲೆಯಾಗಿದೆ. ನೂರು ಶೇಕಡದಷ್ಟು ಲಸಿಕೆ ಹಾಕಿಸಿಕೊಂಡ ಕೀರ್ತಿಗೆ ಪಾತ್ರವಾಗಿದೆ.
ವಯನಾಡ್ ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 6,51,967 ಜನರು ಲಸಿಕೆ ಪಡೆಯಲು ಅರ್ಹರಾಗಿದ್ದು, ಅವರಲ್ಲಿ 6,15,729 ಮಂದಿಗೆ ಈಗಾಗಲೇ ಲಸಿಕೆ ವಿತರಿಸಲಾಗಿದೆ. ಉಳಿದವರು ಕೊರೋನಾ ಕಾರಣದಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಅರ್ಹರಿಲ್ಲ. ಇದರಿಂದಾಗಿ ಅರ್ಹರಿರುವವರಿಗೆ ಲಸಿಕೆ ಹಾಕಿಸಲಾಗಿದೆ.
ಜಿಲ್ಲೆಯಲ್ಲಿ 36,238 ಜನರಿಗೆ ಲಸಿಕೆ ಹಾಕಲು ಬಾಕಿ ಉಳಿದಿದ್ದಾರೆ. ಈ ಪೈಕಿ ಕಳೆದ ಮೂರು ತಿಂಗಳಲ್ಲಿ 24,529 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರಿಂದಾಗಿ ಅವರು ಲಸಿಕೆ ಹಾಕಿಸಿಕೊಳ್ಳಲು ಅರ್ಹರಿಲ್ಲ. 1,243 ಜನರು ಲಸಿಕೆ ಹಾಕಿಸಿಕೊಳ್ಳಲು ಸಿದ್ಧರಿಲ್ಲ. ಉಳಿದ ಜನರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಅವರಿಗೆ ಸದ್ಯ ಲಸಿಕೆ ವಿತರಿಸಲು ಸಾಧ್ಯವಿಲ್ಲ. ಉಳಿದಂತೆ ಬಹುತೇಕ ಎಲ್ಲರಿಗೂ ಲಸಿಕೆ ವಿತರಿಸಲಾಗಿದೆ.