ಮುಂಬೈ, ಆ.20 (DaijiworldNews/HR): ಬುಲ್ದಾನ ಜಿಲ್ಲೆಯ ತಡೆಗಾಂವ್ ಪಥದ ಬಳಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನವು ಶುಕ್ರವಾರ ಮಗುಚಿ ಬಿದ್ದ ಪರಿಣಾಮ ್ 12 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಒಟ್ಟು 16 ಕಾರ್ಮಿಕರನ್ನು ನಾಗಪುರ- ಮುಂಬೈ ಸಮೃದ್ಧಿ ಹೆದ್ದಾರಿ ಯೋಜನೆ ಕಾಮಗಾರಿಗಾಗಿ ಕರೆದೊಯ್ಯಲಾಗುತ್ತಿದ್ದು, ರಸ್ತೆಯಲ್ಲಿದ್ದ ದೊಡ್ಡ ಗುಂಡಿಯ ಕಾರಣ ವಾಹನ ಮಗುಚಿ ಬಿದ್ದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಚಾರ್ವಿಯಾ ತಿಳಿಸಿದ್ದಾರೆ.
ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಮಿಕರು ಬಿಹಾರ ಮತ್ತು ಉತ್ತರ ಪ್ರದೇಶದವರು ಎಂದು ತಿಳಿಸಿದ್ದಾರೆ.