ನವದೆಹಲಿ, ಆ.20 (DaijiworldNews/HR): ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ಪ್ರಜಾಪ್ರಭುತ್ವದ ಆದರ್ಶ ನಾಯಕರಾಗಿದ್ದು, ಅದನ್ನು ಆಡಳಿತ ಪಕ್ಷಗಳು ಹಾಗೂ ವಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನೆಹರು ಮತ್ತು ವಾಜಪೇಯಿ ಅವರು ತಾವು ಪ್ರಜಾಸತ್ತಾತ್ಮಕ ಘನತೆಯಿಂದ ಕಾರ್ಯನಿರ್ವಹಿಸುವುದಾಗಿ ಹೇಳುತ್ತಿದ್ದು, ವಾಜಪೇಯಿ ಅವರ ಪರಂಪರೆ ನಮಗೆ ಸ್ಫೂರ್ತಿದಾಯಕ ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರು ಕೂಡ ಭಾರತದ ಪ್ರಜಾಪ್ರಭುತ್ವಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ" ಎಂದರು.
ಇನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ತಾವು ವಿಪಕ್ಷ ನಾಯಕರಾಗಿದ್ದಾಗಿನ ದಿನಗಳನ್ನು ಹಾಗೂ ಸದನದಲ್ಲಿ ಗದ್ದಲ ಸೃಷ್ಟಿಸುವಲ್ಲಿ ವಿಪಕ್ಷಗಳ ನೇತೃತ್ವವನ್ನು ತಾವು ವಹಿಸಿದ್ದನ್ನು ನೆನಪಿಸಿಕೊಂಡು ಮಾತನಾಡಿದ ಗಡ್ಕರಿ "ನಾನು ಒಮ್ಮೆವಾಜಪೇಯಿ ಅವರನ್ನು ಭೇಟಿಯಾದಾಗ, ಪ್ರಜಾಪ್ರಭುತ್ವದಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲ ನಿಮ್ಮ ಸಂದೇಶವನ್ನು ಜನರಿಗೆ ತಲುಪಿಸುವುದು ಮುಖ್ಯ ಎಂದರು" ಎಂದು ತಿಳಿಸಿದ್ದಾರೆ.