ಛತ್ತೀಸ್ಗಡ, ಆ 20 (DaijiworldNews/PY): "ಛತ್ತೀಸ್ಗಡದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಇಬ್ಬರು ಐಟಿಬಿಪಿ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಪ್ರಾತಿನಿಧಿಕ ಚಿತ್ರ
"ಛೋಟೆಡೊಂಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯಾಹ್ನ 12.10ರ ಸುಮಾರಿಗೆ ಈ ಘಟನೆ ನಡೆದಿದೆ" ಎಂದು ಬಸ್ತಾರ್ ಐಜಿ ಪಿ ಸುಂದರರಾಜ್ ತಿಳಿಸಿದ್ದಾರೆ.
"ಐಟಿಬಿಪಿಯ ಸಹಾಯಕ ಕಮಾಂಡೆಂಟ್ ಸುಧಾಕರ್ ಶಿಂಧೆ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ ಗುರುಮುಖ್ ಸಿಂಗ್ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ" ಎಂದು ಹೇಳಿದ್ದಾರೆ.
"ದಾಳಿ ನಡೆಸಿದ ಬಳಿಕ ನಕ್ಸಲರು ಒಂದು ಎಕೆ -47 ರೈಫಲ್, ಎರಡು ಬುಲೆಟ್ ಪ್ರೂಫ್ ಜಾಕೆಟ್ ಹಾಗೂ ವೈರ್ಲೆಸ್ ಸೆಟ್ ಲೂಟಿ ಮಾಡಿದ್ದು, ಸ್ಥಳದಿಂದ ಪರಾರಿಯಾಗಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.