ನವದೆಹಲಿ, ಆ.20 (DaijiworldNews/HR): ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ಮತ್ತು ಕೊಲೆಗೀಡಾದ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬದೊಂದಿಗಿನ ಪೋಟೊ ಹೊಂದಿರುವ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಂಚಿಕೊಂಡ ಪೋಸ್ಟ್ ಅನ್ನು ಫೇಸ್ಬುಕ್ ಶುಕ್ರವಾರ ತೆಗೆದುಹಾಕಿದೆ ಎಂದು ತಿಳಿದು ಬಂದಿದೆ.
ಫೇಸ್ಬುಕ್ ತನ್ನ ಮಾಲೀಕತ್ವದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ ತನ್ನ ನೀತಿಗಳನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದ್ದು, ಕಂಪನಿಯು ರಾಹುಲ್ ಗಾಂಧಿಗೆ ಅವರ ಪೋಸ್ಟನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.
ಫೇಸ್ಬುಕ್ ರಾಹುಲ್ ಗಾಂಧಿಗೆ ಪತ್ರ ಬರೆದ ಕೆಲವು ದಿನಗಳ ನಂತರ, ಈ ಪೋಸ್ಟನ್ನು ತೆಗೆದು ಹಾಕುವಂತೆ ಕೇಳಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದಿಂದ ಸಮನ್ಸ್ ಸ್ವೀಕರಿಸಿದ ಒಂದು ವಾರದ ನಂತರ ಅದು ರಾಹುಲ್ ಗಾಂಧಿಗೆ ಪತ್ರ ಬರೆದಿದೆ.
ಎನ್ಸಿಪಿಸಿಆರ್ ಈ ಹಿಂದೆ ಫೇಸ್ಬುಕ್ಗೆ ಪತ್ರ ಬರೆದು, ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಕೇಳಿದ್ದು,13 ರಂದು ತನ್ನ ನೋಟಿಸ್ಗೆ ಯಾವುದೇ ಪ್ರತಿಕ್ರಿಯೆಯಿಲ್ಲದ ಕಾರಣ ಅದರ ಪ್ರತಿನಿಧಿ ಖುದ್ದಾಗಿ ಹಾಜರಾಗುವಂತೆ ಫೇಸ್ಬುಕ್ಗೆ ಸಮನ್ಸ್ ಜಾರಿ ಮಾಡಿತು.