ಬೆಂಗಳೂರು, ಆ 20 (DaijiworldNews/MS): ಉಗ್ರ ಮನಸ್ಥಿತಿಯ ಆರೆಸ್ಸೆಸ್ ಮತ್ತು ಬಿಜೆಪಿಗೂ ಬಹಳ ಸಾಮ್ಯತೆ ಇದೆ ಎಂದು ರಾಜ್ಯ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಈ ಕುರಿತು ತನ್ನ ಅಧಿಕೃತ ಟ್ವಿಟ್ವರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ , ಪ್ರಜಾಪ್ರಭುತ್ವ ಒಪ್ಪದ, ನೈತಿಕ ಪೊಲೀಸ್ಗಿರಿ ಪ್ರತಿಪಾದಿಸುವ ಮೂಲಭೂತವಾದಿ ಉಗ್ರ ಮನಸ್ಥಿತಿಯ ಆರೆಸ್ಸೆಸ್ ಮತ್ತು ಬಿಜೆಪಿಗೆ ತಾಲಿಬಾನಿಗಳೇ ಆದರ್ಶ, ಹೀಗಾಗಿ ತಾಲಿಬಾನಿಗಳಿಗೂ ಆರೆಸ್ಸೆಸ್ ಮತ್ತು ಬಿಜೆಪಿಗೂ ಬಹಳ ಸಾಮ್ಯತೆ ಇದೆ ಮೊನ್ನೆ ರಾಜ್ಯದಲ್ಲಿ ಗುಂಡು ಹಾರಿಸಿ ನಿರೂಪಿಸಿದ್ದರು, ಈಗ ತ್ರಿಪುರದ ಬಿಜೆಪಿ ಶಾಸಕ ಬಿಜೆಪಿಯ ತಾಲಿಬಾನ್ ಅನುಕರಣೆಯನ್ನ ಬಾಯ್ಬಿಟ್ಟು ಹೇಳಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಇದಕ್ಕೂ ಮುನ್ನ ಕಾಂಗ್ರೆಸ್ ಬಿಜೆಪಿಯ ಡಕೋಟಾ ಇಂಜಿನ್ ಸರ್ಕಾರ ಎಂದಿಗೂ ಟೇಕಾಫ್ ಆಗುವುದಿಲ್ಲ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿತ್ತು.