ಭೋಪಾಲ್, ಆ 20 (DaijiworldNews/PY): ಇಂಧನ ದರ ಏರಿಕೆ ಕುರಿತ ಪ್ರಶ್ನೆಗೆ ಕೋಪಗೊಂಡ ಬಿಜೆಪಿ ನಾಯಕರೋರ್ವರು, "ನೀವು ಅಫ್ಗಾನಿಸ್ತಾನಕ್ಕೆ ಹೋಗಿ ಅಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 50 ರೂ. ಇದೆ" ಎಂದಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮಿತಿ ಮೀರಿದೆಯಲ್ಲಾ ಎಂದು ಸುದ್ದಿಗಾರರೋರ್ವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶದ ಕಟ್ನಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಾಮರತನ್ ಪಾಯಲ್ ಅವರು, "ನೀವು ಅಫ್ಗಾನಿಸ್ತಾನಕ್ಕೆ ಹೋಗಿ ಬಿಡಿ. ಅಲ್ಲಿ ಪೆಟ್ರೋಲ್ ದರ ಲೀಟರ್ಗೆ 50 ರೂ. ಇದೆ. ಆದರೆ, ಬಳಸುವವರು ಯಾರೂ ಇಲ್ಲ. ಅಲ್ಲಿ ಹಾಕಿಸಿಕೊಂಡು ಬನ್ನಿ. ಭಾರತದಲ್ಲಿ ಸುರಕ್ಷತೆಯಾದರೂ ಇದೆ. ಆ ಬಗ್ಗೆ ಯೋಚನೆ ಮಾಡಿ" ಎಂದು ಹೇಳಿದ್ದಾರೆ.
"ಕೊರೊನಾದ ಮೂರನೇ ಅಲೆ ನಮ್ಮನ್ನು ಅಪ್ಪಳಿಸುವ ರೀತಿ ಇದೆ. ಪತ್ರಕರ್ತರಾಗಿ ನೀವು ಪೆಟ್ರೋಲ್ ದರದ ಬಗ್ಗೆ ಮಾತನಾಡುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.
"ರಾಮರತನ್ ಪಾಯಲ್ ಹಾಗೂ ಅವರನ್ನು ಸುತ್ತುವರಿದಿದ್ದ ಬೆಂಬಲಿಗರು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಹಾಗೂ ಮಾಸ್ಕ್ ಕೂಡಾ ಧರಿಸಿಲ್ಲ. ಇದು ವಿಪರ್ಯಾಸ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.