ಗುಜರಾತ್, ಆ 20 (DaijiworldNews/PY): "ವಿನಾಶಕಾರಿ ಹಾಗೂ ಭಯೋತ್ಪಾದನೆ ಶಕ್ತಿಗಳು ಸ್ವಲ್ಪ ಸಮಯದವರೆಗೆ ಪ್ರಾಬಲ್ಯ ಸಾಧಿಸಬಹುದು. ಆದರೆ, ಅವರ ಅಸ್ತಿತ್ವ ಶಾಶ್ವತವಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುಜರಾತ್ನ ಸೋಮನಾಥ್ ಮಂದಿರದ ವಿವಿಧ ಯೋಜನೆಗಳಿಗೆ ವರ್ಚುವಲ್ ವ್ಯವಸ್ಥೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, "ಹಲವಾರು ಬಾರಿ ಸೋಮನಾಥ್ ದೇವಾಲಯವನ್ನು ನಾಶಪಡಿಸಲಾಗಿತ್ತು. ಅಲ್ಲದೇ, ಇಲ್ಲಿನ ವಿಗ್ರಹಗಳನ್ನು ಕೂಡಾ ವಿರೂಪಗೊಳಿಸಲಾಗಿತ್ತು. ಆದರೆ, ದೇವಾಲಯ ಮತ್ತೆ ತನ್ನ ವೈಭವನ್ನು ಪಡೆದಿದೆ. ಈ ವಿಚಾರ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ" ಎಂದಿದ್ದಾರೆ.
ಈ ವೇಳೆ ಪ್ರವಾಸೋದ್ಯಮದ ಬಗ್ಗೆ ಪ್ರಸ್ತಾಪಿಸಿದ ಅವರು, "ಪ್ರವಾಸೋದ್ಯಮ ಸೂಚ್ಯಂಕದಲ್ಲಿ 2013ರಲ್ಲಿ ಭಾರತವು 65ನೇ ಸ್ಥಾನದಲ್ಲಿತ್ತು. ಆದರೆ, 2019ರಲ್ಲಿ 34ನೇ ಸ್ಥಾನಕ್ಕೆ ಜಿಗಿದಿದೆ" ಎಂದು ತಿಳಿಸಿದ್ದಾರೆ.