ಬೆಂಗಳೂರು, ಆ 20 (DaijiworldNews/MS): 'ಬಿಜೆಪಿಯ ಡಕೋಟಾ ಇಂಜಿನ್ ಸರ್ಕಾರ ಎಂದಿಗೂ ಟೇಕಾಫ್ ಆಗುವುದಿಲ್ಲ' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ತನ್ನ ಅಧಿಕೃತ ಟ್ವಿಟ್ವರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ಕೆಲವರಿಗೆ ಇಷ್ಟವಿಲ್ಲದ ಖಾತೆಯನ್ನು ಕೊಡಲಾಗಿದೆ. ಇನ್ನು ಕೆಲವರಿಗೆ ಕಷ್ಟವಾಗುವ ಖಾತೆ ಸಿಕ್ಕಿದೆ. ಸಚಿವರು ತಮ್ಮ ಖಾತೆಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಹೀಗಿರುವಾಗ ಅವರು ತಮ್ಮ ಖಾತೆಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವುದು ದೂರದ ಮಾತು. ಒಟ್ಟಿನಲ್ಲಿ ರಾಜ್ಯದ ಅಭಿವೃದ್ದಿ ಮರೀಚಿಕೆ’ ಎಂದು ವ್ಯಂಗ್ಯವಾಡಿದೆ.
ಕೋವಿಡ್ 2ನೇ ಅಲೆಯನ್ನು ಆಹ್ವಾನಿಸಿದ್ದು ಬಿಜೆಪಿಯ ಉಪಚುನಾವಣಾ ಜಾತ್ರೆ. ಕೋವಿಡ್ 3ನೇ ಅಲೆಯನ್ನು ಆಹ್ವಾನಿಸುತ್ತಿರುವುದು ಬಿಜೆಪಿಯ ಜನಾಶೀರ್ವಾದಯಾತ್ರೆ. ಕೋವಿಡ್ನಿಂದ ಜನರನ್ನು ರಕ್ಷಸಬೇಕಿದ್ದ ಬಿಜೆಪಿ ಸರ್ಕಾರ ತನ್ನ ಭ್ರಷ್ಟಾಚಾರ ಮತ್ತು ರಾಜಕೀಯ ಹಿತಾಸಕ್ತಿಗಾಗಿ ರಾಜ್ಯವನ್ನು ದುರಂತಕ್ಕೆ ತಳ್ಳಿತ್ತು, ಮುಂದೆಯೂ ತಳ್ಳಲಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
"ಕಳೆದ 3 ದಿನಗಳಿಂದ ವಿಜೆಪಿ ಜನಾಶೀರ್ವಾದಯಾತ್ರೆ ನಡೆಸುತ್ತಾ ಪ್ರತಿದಿನವೂ, ಪ್ರತಿ ಕ್ಷಣವೂ ಸರ್ಕಾರವೇ ಜಾರಿಗೊಳಿಸಿದ ಕೋವಿಡ್ ನಿಯಮ ಉಲ್ಲಂಘಿಸುತ್ತಿದೆ. ಗೃಹ ಸಚಿವರೇ, ಇದುವರೆಗೂ ಎಷ್ಟು ಪ್ರಕರಣ ದಾಖಲಾಗಿದೆ?, ಬಿಜೆಪಿ ಅಧ್ಯಕ್ಷರನ್ನು ಹೊಣೆ ಮಾಡಲಾಗಿದೆಯೇ?, ಪೊಲೀಸರು ಯಾತ್ರೆಯ ನಿಯಮ ಉಲ್ಲಂಘನೆಯನ್ನು ತಡೆಯುವ ಯತ್ನ ಮಾಡಲಿಲ್ಲವೇಕೆ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಕೊಂದ ತಾಲಿಬಾನಿಬಿಜೆಪಿ ಪ್ರತಿಭಟಿಸಿದ ರೈತರ ಮೇಲೆ ಲಾಠಿ ಚಾರ್ಜ್ ನಡೆಸಿ ದೌರ್ಜನ್ಯ ಎಸಗಿತ್ತು ಲಾಕ್ಡೌನ್ ನಷ್ಟದಿಂದ ಕಂಗೆಟ್ಟ ರೈತರನ್ನು ಕಣ್ಣೆತ್ತಿಯೂ ನೋಡದೆ ಅವರ ಬದುಕನ್ನು ನಿರ್ನಾಮ ಮಾಡಿದೆ ರೈತ ವಿರೋಧಿ ಬಿಜೆಪಿ ಈಗ ರೈತರನ್ನ ದಲ್ಲಾಳಿಗಳು ಎಂದು ಅವಮಾನಿಸಿದೆ, ರೈತರ ಕ್ಷಮೆ ಕೇಳಬೇಕು ಬಿಜೆಪಿಯನ್ನು ಒತ್ತಾಯಿಸಿದೆ.
.