ನವದೆಹಲಿ, ಆ 20 (DaijiworldNews/PY): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಲೋಕಸಭೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 77ನೇ ಜನ್ಮ ದಿನಾಚರಣೆಯ ಸಂದರ್ಭ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು.
ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, "ರಾಜೀವ್ ಗಾಂಧಿ ಅವರು ಅಗಾಧ ದೃಷ್ಟಿಕೋನ ಹೊಂಡಿದ್ದ ವ್ಯಕ್ತಿ, ಅವರ ದೂರದೃಷ್ಟಿಯ ನೀತಿಗಳಿಂದ ಆಧುನಿಕ ಭಾರತವನ್ನು ನಿರ್ಮಿಸಲು ನೆರವಾಯಿತು. ಅವರಿಗೆ ನನ್ನ ನಮನಗಳು" ಎಂದು ತಿಳಿಸಿದ್ದಾರೆ.
ರಾಜೀವ್ ಗಾಂಧಿ ಅವರು 1944ರ ಆಗಸ್ಟ್ 20ರಂದು ಜನಿಸಿದ್ದು, ಅಕ್ಟೋಬರ್ 1984ರಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಇವರು 1989 ಅಕ್ಟೋಬರ್ 2ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ತಮಿಳುನಾಡಿನ ಪೆರಂಬೂರಿನಲ್ಲಿ ಮೇ 1991 ರಲ್ಲಿ ಚುನಾವಣಾ ರ್ಯಾಲಿಯ ವೇಳೆ ಎಲ್ಟಿಟಿ ಸುಸೈಡ್ ಬಾಂಬರ್ನಿಂದ ಹತ್ಯೆಗೊಳಗಾಗಿದ್ದರು.