ಔರಂಗಾಬಾದ್, ಆ.20 (DaijiworldNews/HR): ನಾಸಾದ ಎಂಎಸ್ಐ ಫೆಲೋಶಿಪ್ಸ್ ವರ್ಚುವಲ್ ಪ್ಯಾನೆಲ್ಗೆ ಮಹಾರಾಷ್ಟ್ರದ ಔರಂಗಾಬಾದ್ನ 14 ವರ್ಷದ ಬಾಲಕಿಯೊಬ್ಬಳು ಸ್ಥಾನ ಪಡೆದಿದ್ದಾಳೆ.
ದೀಕ್ಷಾ ಶಿಂಧೆ ಅವರನ್ನು ನಾಸಾದ ಎಂಎಸ್ಐ ಫೆಲೋಶಿಪ್ಸ್ ವರ್ಚುವಲ್ ಪ್ಯಾನೆಲ್ಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಬಾಲಕಿ, "ನಾನು ಕಪ್ಪು ರಂಧ್ರಗಳು ಮತ್ತು ದೇವರು ಬಗ್ಗೆ ಒಂದು ಸಿದ್ಧಾಂತವನ್ನು ಬರೆದಿದ್ದು, 3 ಪ್ರಯತ್ನಗಳ ನಂತರ ನಾಸಾ ಇದನ್ನು ಒಪ್ಪಿಕೊಂಡಿತು. ಅವರು ತಮ್ಮ ವೆಬ್ ಸೈಟ್ ಗೆ ಲೇಖನಗಳನ್ನು ಬರೆಯಲು ನನ್ನನ್ನು ಕೇಳಿದರು" ಎಂದಿದ್ದಾರೆ.
ಇನ್ನು ಶಿಂಧೆ ಅವರ ಸಾಧನೆಯಿಂದ ನೆಟಿಜನ್ ಗಳು ಪ್ರಭಾವಿತರಾಗಿದ್ದು, ಅನೇಕರು ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ.