ರಾಯಚೂರು, ಆ 20 (DaijiworldNews/MS): ಮೊಹರಂ ಪ್ರಯುಕ್ತ ನಡೆದ ಮೆರವಣಿಗೆಯ ವೇಳೆ ವಿದ್ಯುತ್ ಅವಘಡದಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರ ಗ್ರಾಮದಲ್ಲಿ ನಡೆದಿದೆ.
ದೇವರನ್ನು ಹೊತ್ತುಕೊಂಡಿದ್ದ 50 ವರ್ಷದ ಹುಸೇನ್ ಸಾಬ್ ಮುಲ್ಲಾ ಮತ್ತು ಹುಲಿಗೆಮ್ಮ ಎಂಬ 25 ವರ್ಷದ ಮಹಿಳೆ ಮೃತ ದುರ್ದೈವಿಗಳು. ಶುಕ್ರವಾರ ಮುಂಜಾನೆ ಹುಸೇನ್ ಪಾಶಾ ದೇವರು ದಾದನ್ ದೊಡ್ದಿ ದರ್ಗಾಕ್ಕೆ ಭೇಟಿ ನೀಡುವ ವೇಳೆ ವಿದ್ಯುತ್ ವೈಯರ್ ದೇವರನ್ನು ಹೊತ್ತುಕೊಂಡಿದ್ದ ಛತ್ರಿಗೆ ತಗುಲಿದೆ.
ಈ ವೇಳೆ ದೇವರನ್ನು ಹೊತ್ತುಕೊಂಡಿದ್ದ ವ್ಯಕ್ತಿ ಮತ್ತು ದರ್ಶನಕ್ಕೆ ಆಗಮಿಸಿದ್ದ ವ್ಯಕ್ತಿ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಮತ್ತೋರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾನೆ.
ಸ್ಥಳಕ್ಕೆ ಮಸ್ಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.