ನವದೆಹಲಿ, ಆ 20 (DaijiworldNews/MS): 2022ರ ಫೆಬ್ರವರಿ , ವೇಳೆಗೆ ಇಂಡಿಯನ್ ಸ್ಟ್ರಾಟಜಿಕ್ ಪೆಟ್ರೋಲಿಯಂ ರಿಸರ್ವ್(ಐಎಸ್ಪಿಆರ್ಎಲ್)ನ ಭೂಗತ ತೈಲ ಸಂಗ್ರಹಾಗಾರದಲ್ಲಿ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ (ಎಂಆರ್ಪಿಎಲ್) ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್( ಎಚ್ಪಿಸಿಎಲ್) ಸಂಸ್ಥೆಗಳು ಕೂಡ ಕಚ್ಚಾ ತೈಲವನ್ನುತುಂಬಿಸಿಡಲು ಸಿದ್ಧತೆ ನಡೆಸಿವೆ.
ಎ ಐಎಸ್ಪಿಆರ್ಎಲ್ನಲ್ಲಿ ತುಂಬಿಡಲಾದ ಸ್ವಲ್ಪ ಪ್ರಮಾಣದ ಕಚ್ಚಾ ತೈಲವನ್ನು ಮಾರಾಟ ಮಾಡುವ ಮೂಲಕ ಅಲ್ಲಿ ಇನ್ನಷ್ಟು ತೈಲ ಶೇಖರಣೆಗೆ ಅಗತ್ಯವಾದ ಸ್ಥಳಾವಾಕಾಶವನ್ನು ಮಾಡುವ ಮೂಲಕ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ವರದಿ ತಿಳಿಸಿದೆ.
ವಾಣಿಜ್ಯ ಉದ್ದೇಶಕ್ಕಾಗಿ ಭೂಗತ ಸಂಗ್ರಹಾಗಾರದ ಸ್ವಲ್ಪ ಸ್ಥಳವನ್ನು ಎಂಆರ್ಪಿಎಲ್ ಮತ್ತು ಎಚ್ಪಿಸಿಎಲ್ ಗುತ್ತಿಗೆ ಪಡೆಯಲಿವೆ. ಅನಂತರ ಅಲ್ಲಿ ವಿವಿಧ ದರ್ಜೆಯ ಕಚ್ಚಾತೈಲಗಳನ್ನು ಈ ಸಂಸ್ಥೆಗಳು ಶೇಖರಿಸಿಡಲಿವೆ. ಐಎಸ್ಪಿಆರ್ಎಲ್ ತನ್ನ ಮಂಗಳೂರಿನ ಭೂಗತ,ಸಂಗ್ರಹಾಗಾರದಲ್ಲಿ ಸಂಗ್ರಹಿಸಿ ಟ್ವಿರುವ ಅಪ್ಪರ್ ಝುಕೂಮ್ ಆಯಿಲ್(ಅಬುಧಾಬಿಯಿಂದ ತರಿಸಿದ ತೈಲ)ನ 5 ದಶಲಕ್ಷ ಬ್ಯಾರೆಲ್ ತೈಲವನ್ನು ಎಂಆರ್ಪಿಎಲ್ಗೆ ಮಾರಾಟ ಮಾಡಲಿದೆ.
ಈ ಮೂಲಕ ಮುಂದಿನ ಫೆಬ್ರವರಿಯ ವೇಳೆಗೆ ಈ ಚೇಂಬರ್ ಅನ್ನು ಖಾಲಿ ಮಾಡಿ, ಅಲ್ಲಿಎಂಚರ್ ಲಕ್ಷ ಟನ್ ಕಚ್ಚಾ ತೈಲವನ್ನು ಶೇಖರಣೆ ಮಾಡಲು ಅನುವು ಮಾಡಿ ಕೊಟ್ಟಿದೆ ಅದೇ ರೀಶಿ, ವಿಶಾಖಪಟ್ಟಣಂ ಸಂಗ್ರಹಾಗಾರದಲ್ಲಿನ ಎಚ್ಪಿಸಿಎಲ್ ಭೋಗ್ಯಕ್ಕೆ ಪಡೆದು 80 ಲಕ್ಷಬ್ಯಾರೆಲ್ ತೈಲವನ್ನುಸಂಗ್ರಹಿಸಿಡಲಿದೆ
ಎಂಆರ್ಪಿಎಲ್ ಮಂಗಳೂರಿನಲ್ಲಿ 300,000 ಟನ್ಗಳಷ್ಟು ಜಾಗವನ್ನು ಬಾಡಿಗೆಗೆ ಪಡೆಯುತ್ತದೆ, ಆದರೆ ಎಚ್ಪಿಸಿಎಲ್ ಸುಮಾರು 7.5 ಮಿಲಿಯನ್ ಬ್ಯಾರೆಲ್ Vizag SPR ನಲ್ಲಿ ಇದೇ ಗಾತ್ರದ ಜಾಗವನ್ನು ತೆಗೆದುಕೊಳ್ಳುತ್ತದೆ, ಇದರಲ್ಲಿ ಇರಾಕಿ ಬಸ್ರಾ ತೈಲವಿದೆ.
ಮುಂದಿನ ಹಂತದಲ್ಲಿ, ಐಎಸ್ಪಿಆರ್ಎಲ್ ತನ್ನ 2.5 ದಶಲಕ್ಷ ಟನ್ಗಳಷ್ಟು (18 ದಶಲಕ್ಷ ಬ್ಯಾರೆಲ್ಗಳಷ್ಟು) ಪಾದುರು ಸಂಗ್ರಹಾರದಲ್ಲಿ ಸ್ವಲ್ಪ ಜಾಗವನ್ನು ಬಾಡಿಗೆಗೆ ನೀಡಲಿದ್ದು ಇದರಲ್ಲಿ ಅರಬ್ ತೈಲದ ಮಿಶ್ರಣವನ್ನು ಹೊಂದಿದೆ