ಶಿವಮೊಗ್ಗ, ಆ.19 (DaijiworldNews/HR): "ಬಿಜೆಪಿ ನಾಯಕರ ಹುಚ್ಚು ಬಿಡಿಸಲು ಸ್ವತಃ ಕಾಂಗ್ರೆಸ್ ಹಣ ಕೊಟ್ಟು ಇಂಗ್ಲೆಂಡ್ನ ಬ್ರಾಡ್ಮೋರ್ ಆಸ್ಪತ್ರೆಗೆ ಸೇರಿಸುತ್ತೇವೆ. ಆರ್ಎಸ್ಎಸ್ ಮನಸ್ಥಿತಿಯವರಿಗೆ ಇಂಥಹ ವಿಷಯಗಳೇ ಸಿಗುವುದು. ಆರ್ಎಸ್ಎಸ್ ಹಾಗೂ ಬಿಜೆಪಿ ಮುಖಂಡರು ದೇಶಕ್ಕಾಗಿ ಒಂದಾದರೂ ಒಳ್ಳೇ ಕೆಲಸ ಮಾಡಿದ್ದರೆ, ಸ್ವಾತಂತ್ರ ಸಂಗ್ರಾಮದಲ್ಲಿ ಆರ್ಎಸ್ಎಸ್ ಚಡ್ಡಿಗಳೇನಾದರೂ ಭಾಗವಹಿಸಿದ್ದರೆ ಆಗ ಹೇಳಲಿ" ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ 77 ನೇ ಜನ್ಮದಿನಾಚರಣೆ ಅಂಗವಾಗಿ 'ರನ್ ಫಾರ್ ರಾಜೀವ್ ಮ್ಯಾರಥಾನ್' ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿ.ಟಿ.ರವಿ ಒಬ್ಬ ಅರೆಹುಚ್ಚ..! ಯಾಕೆ ಈಗ ಆತ ಈ ತರಹದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರೆ ಮಂತ್ರಿ ಪದವಿ ಸಿಕ್ಕಿಲ್ಲ. ಅವರಿಗೆ ಮಂತ್ರಿಯಾಗುವ ಬಯಕೆ ಇದೆ. ಈ ತರಹ ಗಾಂಧಿ ಪರಿವಾರದ ವಿರುದ್ಧ ಮಾತನಾಡಿದರೆ ಮಂತ್ರಿ ಪದವಿ ಖಚಿತವಾಗಿ ಸಿಗುತ್ತದೆ ಎಂಬುದು ರವಿ ನಂಬಿಕೆ" ಎಂದರು.
ಇನ್ನು "ಅಮಿತ್ ಶಾ, ನರೇಂದ್ರ ಮೋದಿ ಹಾಗೂ ಸಂಘ ಪರಿವಾರದ ನಾಯಕರನ್ನ ಮೆಚ್ಚಿಸಬೇಕಿದೆ. ರವಿ ಅವರಿಗೇನಾದರೂ ಮಾನ ಮರ್ಯಾದೆ ಇದ್ದರೆ ನೆಹರು ಹಾಗೂ ರಾಜೀವ್ ಗಾಂಧಿ ಬಗ್ಗೆ ತಿಳಿದುಕೊಂಡು ಮಾತನಾಡದಬೇಕು" ಎಂದಿದ್ದಾರೆ.