ಇಂದೋರ್, ಆ.19 (DaijiworldNews/HR): ಮಧ್ಯಪ್ರದೇಶದ ಇಂದೋರ್ ನಗರದ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿಗೆ ಹತ್ತುಲು ಹೋಗಿ ಕಾಲು ಜಾರಿ ಕೆಳಗೆ ಬೀಳುತ್ತಿದ್ದಂತೆ ಸಹ ಪ್ರಯಾಣಿಕರು ರಕ್ಷಿಸಿದ ನಂತರ ಪ್ರಯಾಣಿಕರ ಸಮಯಪ್ರಜ್ಞೆಗೆ ಭಾರಿ ಪ್ರಶಂಶೆ ವ್ಯಕ್ತವಾಗಿದೆ.
ಮಧ್ಯಪ್ರದೇಶದ ಇಂದೋರ್ ಪಟ್ಟಣದಲ್ಲಿ ನಡೆದಿದ್ದು, ಮಹಿಳೆಯು ಗಡಿಬಿಡಿಯಲ್ಲಿ ರೈಲು ಹತ್ತಲು ಮುಂದಾಗಿದ್ದು, ಕಾಲುಜಾರಿ ಕೆಳಗೆ ಬಿದ್ದಿದ್ದಾಳೆ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಮಹಿಳೆಯು ಓರ್ವ ಪುರುಷ ಮತ್ತು ಮಗುವಿನೊಂದಿಗೆ ರೈಲು ಹತ್ತಲು ಪ್ರಯತ್ನಿಸುತ್ತಿದ್ದರು. ಲಗೇಜನ್ನು ಹಿಡಿದು ಮಗು ಮತ್ತು ಪುರುಷ ರೈಲು ಹತ್ತಿದ್ದಾರೆ. ಗಡಿಬಿಡಿಯಲ್ಲಿದ್ದ ಮಹಿಳೆ ರೈಲು ಹತ್ತಲು ಹೋಗಿ ಜಾರಿ ಬಿದ್ದಿದ್ದಾರೆ.
ಮಃಇಲೆಯು ಬಿದ್ದ ತಕ್ಷಣ ಸುತ್ತಮುತ್ತಲಿದ್ದ ಪ್ರಯಾಣಿಕರು ಜಾಗರೂಕತೆಯಿಂದ ಮಹಿಳೆಯನ್ನು ಎಳೆದಿದ್ದು, ರೈಲು ಕೂಡ ನಿಂತಿತು ಮತ್ತು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.