ಬೆಂಗಳೂರು, ಆ 19 (DaijiworldNews/MS): ತಾಲಿಬಾನರು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಮೇಲೆ ವಿದೇಶಿ ಪ್ರಜೆಗಳು ಕ್ಷಣ ಕ್ಷಣಕ್ಕೂ ಆತಂಕದಲ್ಲೇ ಜೀವನ ಕಳೆಯುತ್ತಿದ್ದಾರೆ. ನಡುವೆ ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರದ ಜತೆ ಸಮನ್ವಯಕ್ಕಾಗಿ ರಾಜ್ಯ ಸರ್ಕಾರವೂ ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಉಮೇಶ್ ಕುಮಾರ್ ಅವರನ್ನು ದೂರವಾಣಿ ಸಂಖ್ಯೆ 080-4984444, 9480800187 ಇ- ಮೇಲ್ afghan_kar@ksp.gov.in ಮೂಲಕ ಸಂಪರ್ಕಿಸಬಹುದು.
ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರ ಹೆಸರು, ಅವರು ಇರುವ ಸ್ಥಳ, ಉದ್ಯೋಗ, ಪಾಸ್ಪೋರ್ಟ್ ವಿವರವನ್ನು ತಿಳಿಸಲು ಸರ್ಕಾರ ಕೋರಿದೆ.