ಬೆಂಗಳೂರು, ಆ. 18 (DaijiworldNews/SM): ಆಗಸ್ಟ್ 23ರಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ಆರಂಭಗೊಳ್ಳಲಿದ್ದು, ಇದಕ್ಕೆ ರಾಜ್ಯ ಸರಕಾರ ಮಾರ್ಗಸೂಚಿ ಪ್ರಕಟಿಸಿದೆ. ಇದರಂತೆ ಶೇಕಡಾ 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಕಾಲೇಜು ಆರಂಭಿಸಬಹುದಾಗಿದೆ.
ಸರಕಾರದ ಮಾರ್ಗಸೂಚಿಯಲ್ಲಿ ಏನಿದೆ?
ಶೇಕಡಾ 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಯಲ್ಲಿ ತರಗತಿ ಆರಂಭಿಸಬಹುದು
ಏಕಕಾಲದಲ್ಲಿ ಪ್ರಥಮ, ದ್ವಿತೀಯ ಪಿಯು ತರಗತಿಗಳು ಆರಂಭಿಸಬಹುದು
ಸೋಮವಾರ, ಮಂಗಳವಾರ, ಬುಧವಾರ ಶೇ. 50ರಷ್ಟು ವಿದ್ಯಾರ್ಥಿಗಳಿಗೆ ಕ್ಲಾಸ್
ಶೇ. 50ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬಹುದು
ಉಳಿದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ತರಗತಿ ನಡೆಸಲು ಸೂಚನೆ
ಗುರುವಾರ, ಶುಕ್ರವಾರ, ಶನಿವಾರ ಉಳಿದ ವಿದ್ಯಾರ್ಥಿಗಳಿಗೆ ಕ್ಲಾಸ್
ಆಗಸ್ಟ್ 23ರಿಂದ ಪಿಯು ಕಾಲೇಜು ತರಗತಿಗಳು ಆರಂಭ
ವಿದ್ಯಾರ್ಥಿಗಳ ಸಂಖ್ಯೆ ಶೇ. 100ಕ್ಕಿಂತ ಕಡಿಮೆ ಇರಬೇಕು
ವಿಶಾಲ ಕೊಠಡಿ ಇದ್ದಲ್ಲಿ ವಾರದ ಎಲ್ಲಾ ದಿನ ಭೌತಿಕ ತರಗತಿ ನಡೆಸಬಹುದು
ಕಾಲೇಜು ಆವರಣದಲ್ಲಿ ದೈಹಿಕ ಅಂತರ ಕಡ್ಡಾಯವಾಗಿದೆ
ಪ್ರಾಂಶುಪಾಲರು, ಸಿಬ್ಬಂದಿಗಳು ಕಡ್ಡಾಯ ಲಸಿಕೆ ಪಡೆದಿರಬೇಕು
ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಪೋಷಕರ ಅನುಮತಿ ಕಡ್ಡಾಯ
ವಿದ್ಯಾರ್ಥಿಗಳು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ