ಬೆಂಗಳೂರು, ಆ 18 (DaijiworldNews/PY): "ಬಿಜೆಪಿಯ ತಾಲಿಬಾನ್ ಸಂಸ್ಕೃತಿ ಅನಾವರಣಗೊಂಡಿದೆ, ಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಲ್ಲದೆ ತಾಲಿಬಾನ್ ಉಗ್ರರಂತೆ ಬಂದುಕಿನಿಂದ ಗುಂಡು ಹಾರಿಸಿ ತನ್ನ ಭಯೋತ್ಪಾದಕ ಮನಸ್ಥಿತಿಯನ್ನು ನಿರೂಪಿಸಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಬಿಜೆಪಿಯ ತಾಲಿಬಾನ್ ಸಂಸ್ಕೃತಿ ಅನಾವರಣಗೊಂಡಿದೆ, ಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಲ್ಲದೆ ತಾಲಿಬಾನ್ ಉಗ್ರರಂತೆ ಬಂದುಕಿನಿಂದ ಗುಂಡು ಹಾರಿಸಿ ತನ್ನ ಭಯೋತ್ಪಾದಕ ಮನಸ್ಥಿತಿಯನ್ನು ನಿರೂಪಿಸಿದೆ ಬಿಜೆಪಿ ತಾಲಿಬಾನಿಗಳಿಗೂ ಬಿಜೆಪಿಗೂ ವ್ಯತ್ಯಾಸವೇನಿಲ್ಲ! ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಬಿಜೆಪಿ ಉಗ್ರರನ್ನು ಬಂಧಿಸಬೇಕು" ಎಂದು ಆಗ್ರಹಿಸಿದೆ.
"ಕಾಂಗ್ರೆಸ್ ಸಂಸತ್ತಿನಲ್ಲಿ ಪರಿಚಯ ಮಾಡಿಕೊಳ್ಳಲು ಬಿಡಲಿಲ್ಲ ಹಾಗಾಗಿ ಯಾತ್ರೆ ಮಾಡುತ್ತಿದ್ದೇವೆ ಎನ್ನುತ್ತಿದೆ ಬಿಜೆಪಿ. ಹಾಗಿದ್ದರೆ ಕನ್ನಡಿಗರಿಗೆ ಬಿಜೆಪಿ ಸಂಸದರ ಪರಿಚಯವಿಲ್ಲವೇ!? ರಾಜ್ಯದ ಪರ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರೆ, ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರೆ, ಕರೋನಾ ನಡುವೆ ಈ ನಾಟಕದ ಯಾತ್ರೆ ಬೇಕಿತ್ತೇ ಬಿಜೆಪಿ?" ಎಂದು ಪ್ರಶ್ನಿಸಿದೆ.
"ಕರೋನಾ ಎಂದರೆ ಬಿಜೆಪಿಗೆ 'ಲೂಟಿಭಾಗ್ಯ' ಸಿಕ್ಕಂತೆ! ಲೂಟಿಗಾಗಿ ಮುನ್ನೆಚ್ಚರಿಕೆ ನಿರ್ಲಕ್ಷಿಸಿ 1ನೇ ಅಲೆ, 2ನೇ ಅಲೆಗಳನ್ನ ಬರಲು ಬಿಟ್ಟು ಜನರನ್ನ ಬಲಿ ಕೊಟ್ಟಿದೆ ಈ ಭ್ರಷ್ಟ ಸರ್ಕಾರ. ಕೋವಿಡ್ ಉಪಕರಣಗಳನ್ನ ಇತರ ರಾಜ್ಯಗಳಿಗಿಂತ ದುಪ್ಪಟ್ಟು ದರದಲ್ಲಿ ಖರೀದಿಸಿದ್ದೇಕೆ? ಕರೋನಾ ಸೋಂಕಿನಲ್ಲೂ ಲೂಟಿ ನಡೆಸಲು ನಾಚಿಕೆ ಇಲ್ಲವೇ ಬಿಜೆಪಿ?" ಎಂದು ಕೇಳಿದೆ.
"ಪ್ರತಿಭಟಿಸುತ್ತಿರುವವರು ರೈತರೇ ಅಲ್ಲ ದಲ್ಲಾಳಿಗಳು ಎಂದ ರೈತರನ್ನು ಅಪಮಾನಿಸಿದ ಶೋಬಾ ಕರಂದ್ಲಾಜೆ ಅವರು ಎಲುಬಿಲ್ಲದ ನಾಲಿಗೆ ಹರಿಬಿಟ್ಟಿದ್ದು ಖಂಡನೀಯ. ರೈತರಲ್ಲದಿದ್ದರೆ ಅವರೊಂದಿಗೆ ಹಲವು ಬಾರಿ ಸಭೆ ನಡೆಸಿದ್ದೇಕೆ? ಕಂಪೆನಿಗಳ ದಲ್ಲಾಳಿ ಸರ್ಕಾರಕ್ಕೆ ಇತರರನ್ನ ದಲ್ಲಾಳಿಗಳು ಎಂದು ಕರೆದೇ ಅಭ್ಯಾಸ. ಈ ಬಗ್ಗೆ ರೈತರಲ್ಲಿ ಬಿಜೆಪಿ ಕ್ಷಮೆ ಕೇಳಬೇಕು" ಎಂದಿದೆ.
"ಕೇಂದ್ರದ ಲಸಿಕೆ ಹಂಚಿಕೆಯ ಅನ್ಯಾಯ ಪ್ರಶ್ನಿಸದೆ ಗುಲಾಮರಂತೆ ವರ್ತಿಸಿ ಈಗ ಕಂಪೆನಿಗಳ ಮುಂದೆ ಭಿಕ್ಷಾಟನೆಗೆ ಮುಂದಾಗಿದ್ದು ನಾಚಿಕೆಗೇಡು. ಪಿಎಂ ಕೇರ್ಸ್ ಹಣದಲ್ಲಿ, ಬಜೆಟ್ಟಿನ 35,000 ಕೋಟಿ ಲಸಿಕೆಯ ಹಣದಲ್ಲಿ ರಾಜ್ಯಕ್ಕೆ ಪಾಲಿಲ್ಲವೇ? ಖಾಸಗಿ ಲಸಿಕೆ ಮಾರಾಟಕ್ಕೆ ಅವಕಾಶ ನೀಡಿದ್ದೇಕೆ?" ಉತ್ತರಿಸಿ ಬಿಜೆಪಿ ಎಂದು ಪ್ರಶ್ನಿಸಿದೆ.