ನವದೆಹಲಿ, ಆ18 (DaijiworldNews/MS): ಭಾರತ ಬಯಸಿದರೆ ಅಫ್ಘಾನಿಸ್ತಾನದಲ್ಲಿ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ್, ಅದಕ್ಕೆ ಬೇಕಿದ್ದರೆ ನಾವು ಅವಕಾಶ ಮಾಡಿಕೊಡುತ್ತೇವೆ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.
ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ ಆದರೆ ಭಾರತ ಇಚ್ಚಿಸಿದರೆ ನಮ್ಮ ನೆಲದಲ್ಲಿ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಆ ಯೋಜನೆಗಳೆಲ್ಲಾ ಜನರ ಪರವಾಗಿದೆ ಎಂದು ವಕ್ತಾರ ಶಹೀನ್ ಪಾಕಿಸ್ತಾನದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ದುವಿನಲ್ಲಿ ಹೇಳಿದ್ದಾರೆ.
ಈ ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಭಾರತ 3 ಬಿಲಿಯನ್ ಡಾಲರ್ ಗೂ ಅಧಿಕ ಮೊತ್ತ ಹೂಡಿಕೆ ಮಾಡಿದೆ. ಅಣೆಕಟ್ಟು, ಸಅಫ್ಘಾನಿಸ್ತಾನದ ಸಂಸತ್ತು ಮತ್ತು ಹಲವು ರಚನಾತ್ಮಕ ರಸ್ತೆಗಳ ನಿರ್ಮಾಣಕ್ಕೆ ಅಫ್ಘಾನಿಸ್ತಾನ ಭಾರತದ ನೆರವನ್ನು ಪಡೆದಿದೆ. ಸಧ್ಯ ಭಾರತ ಅಫ್ಘಾನ್ ನ 34 ಪ್ರಾಂತ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ವೃತ್ತಿಪರರನ್ನು ಭಾರತ ವಾಪಾಸ್ ಕರೆಸಿಕೊಂಡಿದೆ.
ಕಳೆದ ಸೋಮವಾರ ಅಫ್ಘಾನಿಸ್ತಾನ ತಾಲಿಬಾನೀಯರ ಕೈವಶವಾದ ಬಳಿಕ ಭಾರತದ ಬಗ್ಗೆ ನೀಡುತ್ತಿರುವ ಮೊದಲ ಹೇಳಿಕೆ ಇದಾಗಿದೆ.