ಚಿಕ್ಕಮಗಳೂರು, ಆ 18 (DaijiworldNews/PY): "ರಾಷ್ಟ್ರೀಯ ನಾಯಕರ ಕುರಿತು ಅವಹೇಳನ ಮಾಡುವುದು ಸರಿಯಲ್ಲ. ಅವರನ್ನು ಗೌರವಿಸುವುದು ಪ್ರತಿಯೋರ್ವರ ಕರ್ತವ್ಯವಾಗಿದೆ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಚಿಕ್ಕಮಗಳೂರಿಗೆ ಭೇಟಿ ನೀಡಿದ ವೇಳೆ ರಾಷ್ಟ್ರೀಯ ನಾಯಕರ ಬಗ್ಗೆ ಹುಕ್ಕಾ ಬಾರ್, ಎಣ್ಣೆ ಚರ್ಚೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಷ್ಟ್ರೀಯ ನಾಯಕರ ಬಗ್ಗೆ ಅವಹೇಳನ ಸರಿಯಲ್ಲ. ರಾಷ್ಟ್ರೀಯ ನಾಯಕರನ್ನು ಗೌರವಿಸುವುದು ಮುಖ್ಯ. ಇದಕ್ಕೆ ಪಕ್ಷ, ಜಾತಿ, ಧರ್ಮ, ಬೇಧವಿಲ್ಲ" ಎಂದಿದ್ಧಾರೆ.
"ಪ್ರತಿಯೋರ್ವ ರಾಷ್ಟ್ರೀಯ ನಾಯಕರು ಅವರವರ ಕಾಲಘಟ್ಟದಲ್ಲಿ ಉತ್ತಮವಾದ ಕಾರ್ಯಗಳನ್ನು ಮಾಡಿದ್ದಾರೆ. ಎಲ್ಲರೂ ಕೂಡಾ ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆ ಅವರನ್ನು ಅವಹೇಳನ ಮಾಡುವುದು ಸರಿಯಲ್ಲ. ರಾಷ್ಟ್ರೀಯ ನಾಯಕರನ್ನು ನಾವು ಗೌರವಪೂರ್ವಕವಾಗಿ ನೋಡಬೇಕು" ಎಂದು ತಿಳಿಸಿದ್ದಾರೆ.