ಕಲಬುರಗಿ, ಆ18 (DaijiworldNews/MS): ಆನ್ಲೈನ್ ಕ್ಲಾಸ್ ನಡೆಯುವ ಸಮಯದಲ್ಲಿ ತನಗೆ ಪೋಷಕರಿಂದ ಡಿಸ್ಟರ್ಬ್ ಆಗುತ್ತಿದೆ ಎಂದು ನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್ನ ನಿವಾಸಿ ಬೆಂಗಳೂರು ಬೇಕರಿ ವ್ಯಾಪಾರಿ ಗಿರೀಶ್ ಉಡುಪ ಅವರ ಪುತ್ರನಾಗಿರುವ , ಗುರುಚರಣ್ ಉಡುಪ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ.
ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುರುಚರಣ್ ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆನ್ಲೈನ್ ಕ್ಲಾಸ್ ವೇಳೆ ಅಮ್ಮ ನನಗೆ ಡಿಸ್ಟರ್ಬ್ ಮಾಡಬೇಡ ಎಂದು ಹೇಳಿ ಕೋಣೆನೊಳಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆನ್ ಲೈನ್ ಕ್ಲಾಸ್ ಕೇಳಲು ಕೋಣೆಯೊಳಗೆ ಹೋದಾತ ಎರಡು ತಾಸಿನ ಬಳಿಕವೂ ಹೊರಬರದ ಕಾರಣ ನೋಡಿದಾಗ ಫ್ಯಾನಿಗೆ ನೇತಾಡುವ ಸ್ಥಿತಿಯಲ್ಲಿ ಕಂಡಬಂದಿದ್ದಾನೆ.ಆತ್ಮಹತ್ಯೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.