ಬೆಂಗಳೂರು, ಆ. 17 (DaijiworldNews/SM): ರಾಜ್ಯದ 13 ಜಿಲ್ಲೆಗಳಲ್ಲಿ 83 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂಬುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.
ಬೆಳಗಾವಿ, ಚಿಕ್ಕಮಗಳೂರು, ಕಡೂರು, ತರಿಕೆರೆ, ಸೂಪ ಬಬಲೇಶ್ವರ, ಕೋಲಾರ, ಮುದ್ದೆಬಿಹಾಳ, ಮೂಡಿಗೆರೆ, ಹೊಸನಗರ ಮೊದಲಾದ ತಾಲ್ಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಈ ಜಿಲ್ಲೆಗಳಿಗೆ ಬೇಕಾದ ಸರಕಾರ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದಿಂದ ಹಾವಳಿಯನ್ನು ತಪ್ಪಿಸಲು 6 ಕಿಲೋ ಮೀಟರ್ ದೂರಕ್ಕೆ ಸೈರನ್ ಅಲರಾಂ ಕೊಡುವಂತಹ ವ್ಯವಸ್ಥೆಯನ್ನು 60 ಕಡೆ ಅಳವಡಿಸಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.