ಡೆಹ್ರಾಡೂನ್, ಆ.17 (DaijiworldNews/HR): ಉತ್ತರಾಖಂಡ 2022ರ ವಿಧಾನಸಭಾ ಚುನಾವಣೆಗೆ ಮಾಜಿ ಸೈನಿಕ ಅಜಯ್ ಕೊತಿಯಾಲ್ ಅವರು ಆಮ್ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.
ಈ ಕುರಿತು ಮಾತನಡಿದ ಅವರು, "ರಾಜ್ಯವನ್ನು ಲೂಟಿ ಮಾಡಿದ ರಾಜಕಾರಣಿಗಳಿಂದ ಮುಕ್ತಿ ಪಡೆದು ಒಬ್ಬ ಸೇನಾಪತಿಯು ಮುಖ್ಯಮಂತ್ರಿಯಾಗಬೇಕೆಂದು ಉತ್ತರಾಖಂಡದ ಜನರು ಬಯಸುತ್ತಿದ್ದು, ಅವರು ತನ್ನ ಅಧಿಕಾರವನ್ನು ತನ್ನ ಖಜಾನೆ ತುಂಬಿಕೊಳ್ಳಲು ಖರ್ಚು ಮಾಡದೆ ಜನರ ಸೇವೆ ಮಾಡುತ್ತಾರೆ" ಎಂದರು.
ಇನ್ನು ಉತ್ತರಾಖಂಡದಲ್ಲಿ ಆಮ್ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ, ಕೊತಿಯಾಲ್ ನೇತೃತ್ವದಲ್ಲಿ ಉತ್ತರಾಖಂಡವನ್ನು ಹಿಂದೂಗಳಿಗೆ ಜಾಗತಿಕ ಆಧ್ಯಾತ್ಮಿಕ ರಾಜಧಾನಿಯನ್ನಾಗಿ ಮಾಡುತ್ತದೆ ಮತ್ತು ರಾಜ್ಯದ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಭರವಸೆ ನೀಡಿದ್ದಾರೆ.