ಕೊಚ್ಚಿ ,ಆ.17 (DaijiworldNews/HR): ಅಪ್ರಾಪ್ತ ಬಾಲಕಿಯೂ ತನ್ನ ತಂದೆಯೊಂದಿಗೆ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಹೋಗಲು ಕೇರಳ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಸಾಂಧರ್ಭಿಕ ಚಿತ್ರ
9 ವರ್ಷದ ಅಪ್ರಾಪ್ತ ಬಾಲಕಿಯು ಆಗಸ್ಟ್ 23 ರಂದು ತನ್ನ ತಂದೆಯೊಂದಿಗೆ ಶಬರಿಮಲೆಗೆ ಹೋಗಲು ಅನುಮತಿ ಕೋರಿ ಸಲ್ಲಿಸಿದ ಮನವಿಯ ಮೇರೆಗೆ ಈ ಆದೇಶ ಬಂದಿದೆ ಎನ್ನಲಾಗಿದೆ.
ಅಪ್ರಾಪ್ತ ಬಾಲಕಿಯ ಪರ ವಾದ ಮಂಡಿಸಿದ ವಕೀಲರು, ಅಪ್ರಾಪ್ತ ಬಾಲಕಿಯರು 10 ವರ್ಷ ತುಂಬುವ ಮೊದಲು ಶಬರಿಮಲೆಗೆ ಹೋಗಲು ಬಯಸುತ್ತಾರೆ ಯಾಕೆಂದರೆ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗದಿರಬಹುದು ಎಂದು ಹೇಳಿದ್ದಾರೆ.
ಇನ್ನು ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆಗಸ್ಟ್ 23 ರಂದು ದರ್ಶನಕ್ಕಾಗಿ ಅರ್ಜಿದಾರರು ತಮ್ಮ ತಂದೆಯೊಂದಿಗೆ ಶಬರಿಮಲೆಗೆ ಹೋಗಲು ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ.