ನವದೆಹಲಿ, ಆ 17 (DaijiworldNews/MS): ಸ್ಥಾಪಿತ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ, ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಟ್ವೀಟ್ ಮೂಲಕ ವೀಡಿಯೋಯೊಂದು ಹಂಚಿಕೊಂಡಿದ್ದಾರೆ, ಇದರಲ್ಲಿ ಮಲಯಾಳಂ ಭಾಷೆಯಲ್ಲಿ ಇಬ್ಬರು ತಾಲಿಬಾನ್ ಉಗ್ರರು ಸಂಭಾಷಣೆ ನಡೆಸುತ್ತಿರುವುದು ನೋಡಬಹುದಾಗಿದೆ.
ಇಬ್ಬರು ತಾಲಿಬಾನ್ ಉಗ್ರರು ಪರಸ್ಪರ ಸಂಭಾಷಣೆ ನಡೆಸುತ್ತಿರುವ ವೀಡಿಯೋ "ಸಂಸಾರಿಕಟ್ಟೆ" ಎಂದು ಮಲಯಾಳ ಭಾಷೆಯಲ್ಲಿ ಹೇಳುತ್ತಾರೆ. ಮಲಯಾಳಂ ಭಾಷೆಯಲ್ಲಿ ಸಂಸಾರಿಕಟ್ಟೆ" ಎಂದರೆ ಮಾತನಾಡಬಹುದೇ ? ಎಂಬರ್ಥವಾಗಿದೆ. ಓರ್ವ ತಾಲಿಬಾನಿ ಇನ್ನೋರ್ವ ತಾಲಿಬಾನಿಗೆ ಕೇಳುತ್ತಿರುವ 8 ಸೆಕೆಂಡಿನ ವೀಡಿಯೋ ಶಶಿ ತರೂರ್ ಹಂಚಿಕೊಂಡಿದ್ದಾರೆ.
ಕೆಲ ವರ್ಷಗಳ ಹಿಂದೆ ಕೇರಳದಿಂದ ಕೆಲವು ಯುವಕರು ಉಗ್ರ ಸಂಘಟನೆ ಸೇರಿದ್ದ ಆರೋಪವಿದೆ. ಕೇರಳದ ಯುವಕರು ಐಸಿಸ್, ತಾಲಿಬಾನ್ ಸಂಘಟನೆ ಸೇರುವ ಶಂಕೆ ಹಿನ್ನಲೆಯಲ್ಲಿ ಈ ಎನ್ಐಎ ತನಿಖೆ ನಡೆಸಿತ್ತು, ಇದನ್ನು ಕೇರಳ ಸರಕಾರವೂ ದೃಢೀಕರಿಸಿತ್ತು.ಇದೀಗ ಈ ಶಂಕೆಗೆ ಮಲಯಾಳಂ ಭಾಷೆಯಲ್ಲಿ ಸಂಭಾಷಣೆ ನಡೆಸುವ ವೀಡಿಯೋ ಇದಕ್ಕೆ ಸಾಕ್ಷಿಯಾಗಿದೆ.