ಮೈಸೂರು, ಆ.17 (DaijiworldNews/HR): ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ತಾಲಿಬಾನ್ ಉಗ್ರರು ಇಂತಹ ದಾಳಿ ನಡೆಸಿರುವುದು ಖಂಡನೀಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅಪ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, "ತಾಲಿಬಾನ್ ಉಗ್ರರ ಅಟ್ಟಹಾಸದ ದಾಳಿಗಳಿಂದ ಆತಂಕ ಎದುರಾಗಿದ್ದು, ಇದರ ವಿರುದ್ಧ ಎಲ್ಲಾ ದೇಶಗಳು ಒಟ್ಟಾಗಿ ಧ್ವನಿ ಎತ್ತಬೇಕು" ಎಂದರು.
ಇನ್ನು "ಅಪ್ಘಾನಿಸ್ತಾನದಲ್ಲಿ ಉಂಟಾಗಿರುವ ಪರಿಸ್ಥಿತಿ ಎಲ್ಲರನ್ನೂ ಭಯಗೊಳಿಸುವಂತದ್ದು, ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸಬೇಕು" ಎಂದು ಆಗ್ರಹಿಸಿದ್ದಾರೆ.