ಬೆಂಗಳೂರು, ಆ. 16 (DaijiworldNews/SM): ರಾಜ್ಯದಲ್ಲಿ ರಿಂದ 9 ಮತ್ತು 10ನೇ ತರಗತಿಗಳು ಆಗಸ್ಟ್ 23 ರಿಂದ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ.
9 ಮತ್ತು 10ನೇ ತರಗತಿಗಳು ಸದ್ಯಕ್ಕೆ ಆರಂಭ
ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ನಡೆಯಲಿದೆ ತರಗತಿಗಳು
ವಿದ್ಯಾರ್ಥಿಗಳಿಗೆ ಅನುಮತಿ ಪತ್ರ ಕಡ್ಡಾಯ
ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಯಲ್ಲಿ ಮಾತ್ರ ಶಾಲೆಗಳು ಆರಂಭ
ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಆರೋಗ್ಯ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ
ಮನೆಯಿಂದಲೇ ಮಕ್ಕಳು ಕುಡಿಯುವ ನೀರು, ಉಪಹಾರ ತರಬೇಕು
ಭೌತಿಕ ತರಗತಿ ಹಾಜರಾತಿ ಕಡ್ಡಾಯವಲ್ಲ
ಆನ್ಲೈನ್ ಅಥವಾ ಭೌತಿಕ ಎರಡರಲ್ಲಿ ಒಂದರಲ್ಲಿ ಹಾಜರಾತಿ ಅಗತ್ಯ
ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು
ಸೋಮವಾರದಿಂದ ಶುಕ್ರವಾರದವರೆಗೆ ಭೌತಿಕ ತರಗತಿ ನಡೆಸಲು ಅವಕಾಶ
ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಭೌತಿಕ ತರಗತಿಗಳು ನಡೆಯಲಿವೆ
ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಭೌತಿಕ ತರಗತಿ ನಡೆಸಲು ನಿರ್ಧಾರ
ಶಾಲೆಯನ್ನು ಸಾನಿಟೈಸ್ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು .
ತರಗತಿಗೆ ಹಾಜರಾಗುವ ಶಿಕ್ಷಕರು ಮಾಸ್ಕ್ ಧರಿಸುವುದು ಕಡ್ಡಾಯ
50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು
ಅಡುಗೆ ಮನೆ ಹಾಗೂ ದಾಸ್ತಾನು ವಸ್ತುಗಳನ್ನು ಸಂಪೂರ್ಣವಾಗಿ ಕ್ಲೀನ್ ಮಾಡಬೇಕು
ಶಾಲೆಯಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
ತರಗತಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ