ರಾಮನಗರ, ಆ.16 (DaijiworldNews/HR): ಪ್ರಿಯಾಂಕ ಖರ್ಗೆ ಹಾಗೂ ಸಿ.ಟಿ.ರವಿಯವರ ಹೇಳಿಕೆಯನ್ನು ಗಮನಿಸಿದ್ದೇನೆ ದೇಶಕ್ಕಾಗಿ ಹೋರಾಟ ಮಾಡಿರುವವರ ಬಗ್ಗೆ ಗೌರವದಿಂದ ಮಾತನಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನೆಹರು ವಿಚಾರವಾಗಿ ಹೇಳಿಕೆ ನೀಡಿದ ಸಿ.ಟಿ.ರವಿ ಹಾಗೂ ವಾಜಪೇಯಿ ಬಗ್ಗೆ ಹೇಳಿಕೆ ನೀಡಿದೆ ಪ್ರಿಯಾಂಕ ಖರ್ಗೆ ಮಾತನಾಡಿದ ಅವರು, "ಅವರವರ ವೈಯಕ್ತಿಕ ವಿಚಾರಗಳೇ ಬೇರೆ, ನೆಹರು, ಇಂದಿರಾ ಗಾಂಧಿ, ವಾಜಪೇಯಿ ರವರ ಬಗ್ಗೆ ಲಘುವಾಗಿ ಮಾತನಾಡಬಾರದು. ನೆಹರುರವರು ಈ ದೇಶಕ್ಕೆ ಅವರದ್ದೆ ಆದ ಕೊಡುಗೆ ಕೊಟ್ಟಿದ್ದಾರೆ. ನಮ್ಮ ದೇಶದ ಸ್ವಾತಂತ್ರ್ಯ ವಿಚಾರದಲ್ಲಿ ಅತಿಹೆಚ್ಚು ಜೈಲುವಾಸವನ್ನು ನೆಹರು ಅನುಭವಿಸಿದ್ದಾರೆ" ಎಂದರು.
ಇನ್ನು" ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಹಲವು ಸವಾಲುಗಳಿತ್ತು. ಪ್ರಧಾನಮಂತ್ರಿಯಾಗಿದ್ದ ವೇಳೆ ಹಲವು ಸವಾಲುಗಳನ್ನ ಎದುರಿಸಿದ್ದಾರೆ. ಪಾಕಿಸ್ತಾನದಿಂದ ಬಂದ ನಿರಾಶ್ರಿತರ ವಿಚಾರದಲ್ಲಿ ನೆಹರುರವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕೃಷಿ ವಲಯ, ಕೈಗಾರಿಕಾ ವಲಯದಲ್ಲಿ ಅವರ ಕೊಡುಗೆ ದೊಡ್ಡದು" ಎಂದು ಹೇಳಿದ್ದಾರೆ.