ಹುಬ್ಬಳ್ಳಿ, ಆ 16 (DaijiworldNews/PY): ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಜಗದೀಶ್ ಶೆಟ್ಟರ್, "ಇದು ಕಾಂಗ್ರೆಸ್ಸಿಗರ ಕೊನೆಯ ಕ್ಷಣಗಳು. ಹಾಗಾಗಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ವಾಜಪೇಯಿ ಅವರ ಬಗ್ಗೆ ಕೀಳಾಗಿ ಮಾತನಾಡುವುದು ಅವನತಿಗೆ ಕಾರಣವಾಗುತ್ತದೆ. ಅಜಾತ ಶತ್ರು ಬಗ್ಗೆ ಈ ರೀತಿಯಾಗಿ ಮಾತನಾಡುವುದು ನಾಚಿಕಗೇಡಿನ ಸಂಗತಿ. ಇದು ಕಾಂಗ್ರೆಸ್ಸಿಗರಿಗೆ ಕೊನೇ ಕ್ಷಣಗಳು" ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಹುಕ್ಕಾ ಬಾರ್ ತೆರೆಯಲಿ ಎಂದು ಹೇಳಿದ್ದ ಸಿ. ಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕ್ ಖರ್ಗೆ, "ವಾಜಪೇಯಿ ಅವರು ಹೆವಿ ಡ್ರಿಂಕರ್. ಅವರು ಪ್ರತಿ ದಿನ ಕುಡಿಯುತ್ತಿದ್ದರಂತೆ. ಹಾಗೆಂದು ಬಾರ್ಗಳಿಗೆ ಅವರ ಹೆಸರಿಡಲು ಸಾಧ್ಯವೇ?" ಎಂದಿದ್ದರು.