ಚಿಕ್ಕಮಗಳೂರು, ಆ.16 (DaijiworldNews/HR): ಒಂಟಿ ಸಲಗವೊಂದು ಕಾರಿನಲ್ಲಿ ಹೋಗುತ್ತಿದ್ದ ನಾಲ್ವರ ಮೇಲೆ ದಾಳಿ ಮಾಡಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಬಳಿ ನಡೆದಿದೆ.
ಕಾಡಾನೆ ದಾಳಿಗೆ ಓಮ್ನಿ ಕಾರು ಬಹುತೇಕ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.
ಒಂಟಿ ಸಲಗದ ದಾಳಿಗೆ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದ ಮೂವರಿಗೂ ಗಂಭೀರ ಗಾಯವಾಗಿದೆ. ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ದೌಡಾಯಿಸಿದ್ದಾರೆ.