ಬೆಂಗಳೂರು,ಆ.16 (DaijiworldNews/HR): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಬರುವ ಸಾರ್ವಜನಿಕರು ಮೊಬೈಲ್ ನೊಂದಿಗೆ ಸಿಎಂ ನಿವಾಸಕ್ಕೆ ಬರುವಂತಿಲ್ಲ ಎಂದು ಬೊಮ್ಮಾಯಿ ಅವರ ಆರ್.ಟಿ.ನಗರ ಮನೆಯ ಹೊರಭಾಗದಲ್ಲಿ ಬೋರ್ಡ್ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಬೊಮ್ಮಾಯಿ ಅವರ ನಿವಾಸದಲ್ಲಿ ಈ ಸಂಬಂಧ ಅಧಿಕೃತವಾಗಿ ಬೋರ್ಡ್ ಹಾಕಲಾಗಿದ್ದು, ಇನ್ನು ಮುಂದೆ ಮುಖ್ಯಮಂತ್ರಿ ಭೇಟಿಗೆ ಬರುವ ಸಾರ್ವಜನಿಕರು ಮೊಬೈಲ್ ನೊಂದಿಗೆ ಸಿಎಂ ನಿವಾಸಕ್ಕೆ ಬರುವಂತಿಲ್ಲ ಎಂದು ಹಾಕಲಾಗಿದೆ.
ಇನ್ನು ಬೊಮ್ಮಾಯಿ ಅವರ ನಿವಾಸಕ್ಕೆ ಬರುವವರು ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಾರೆ. ಇದರಿಂದ ಸಿಎಂ ಅವರ ಬೇರೆ ಕೆಲಸಗಳಿಗೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಮೊಬೈಲ್ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.