ಶಿವಮೊಗ್ಗ, ಆ.16 (DaijiworldNews/HR): ಯಾವುದೇ ಹೇಳಿಕೆಗಳಿಂದ ನಾಯಕನಾಗಲು ಸಾಧ್ಯವಿಲ್ಲ. ಜನಪರ ಕೆಲಸ ಮಾಡುವ ಮೂಲಕ ಸಂಘಟನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಎರಡು ಪೆಗ್ ಬೇಕು ಎಂಬ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಅವರು, "ರಾಜ್ಯದ ರಾಜಕಾರಣದಲ್ಲಿ ಬಹಳಷ್ಟು ಜನ ಎಲುಬಿಲ್ಲದ ನಾಲಿಗೆ ರೀತಿ ವರ್ತಿಸುತ್ತಿದ್ದಾರೆ. ಇದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಹೇಳಿಕೆಗಳನ್ನು ಕೊಡುವುದರ ಮೂಲಕ ನಾಯಕತ್ವ ಬೆಳೆದುಬಿಡುತ್ತದೆ ಎಂಬ ಭ್ರಮೆಯಲ್ಲಿದ್ದಾರೆ" ಎಂದರು.
ಇನ್ನು ವಾಜಪೇಯಿಯಂತಹ ನಾಯಕರ ಬಗ್ಗೆ ಕೀಲಾಗಿ ಮಾತನಾಡುವುದು, ಯಾವುದೇ ಪಕ್ಷದವರಿಗೆ ಶೋಭೆ ತರುವುದಿಲ್ಲ" ಎಂದಿದ್ದಾರೆ.
"ಯಡಿಯೂರಪ್ಪ ಅವರು ಹಿಂದೆ ರಾಜ್ಯದಲ್ಲಿ ಹೋರಾಟ ಮಾಡಿದ್ದರು. ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು, ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕೆಂ ಉದ್ದೇಶವಿಟ್ಟುಕೊಂಡು ಹೋರಾಟ ಮಾಡಲಿಲ್ಲ. ರಾಘವೇಂದ್ರ ಅವರಾಗಲಿ, ನಾನಾಗಲಿ ಯಾವುದೇ ಸ್ಥಾನ ಗುರುತಿಸಿಕೊಂಡು ಕೆಲಸ ಮಾಡುತ್ತಿಲ್ಲ.. ಮಾಡುತ್ತಿರುವ ಕೆಲಸವನ್ನು ಜನ ಗುರುತಿಸಬೇ್ಕು" ಎಂದು ಹೇಳಿದ್ದಾರೆ.