ನವದೆಹಲಿ, ಆ 16 (DaijiworldNews/PY): ಕಾಂಗ್ರೆಸ್ ನಾಯಕಿ ಸುಶ್ಮಿತಾ ದೇವ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಸೋಮವಾರ ತಮ್ಮ ಟ್ವಿಟರ್ ಫ್ರೊಫೈಲ್ ಅನ್ನು ಪಕ್ಷದ ಮಾಜಿ ನಾಯಕಿ ಎಂದು ಬದಲಾಯಿಸಿಕೊಂಡಿದ್ದಾರೆ.
ಸುಶ್ಮಿತಾ ದೇವ್ ಅವರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ನೀಡಿ ಪತ್ರ ಬರೆದಿದ್ದು, "ಸಾರ್ವಜನಿಕ ಸೇವೆಯ ಹೊಸ ಅಧ್ಯಾಯವನ್ನು ಆರಂಭಿಸುತ್ತೇನೆ. ರಾಷ್ಟ್ರೀಯ ಕಾಂಗ್ರೆಸ್ ಜೊತೆಗಿನ ನನ್ನ ಮೂರು ದಶಕಗಳ ಓಡಾಟವನ್ನು ನಾನು ಗೌರವಿಸುತ್ತೇನೆ. ನನ್ನ ಸ್ಮರಣೀಯ ಪ್ರಯಾಣವಾಗಿರುವ ಪಕ್ಷಕ್ಕೆ, ಅದರ ಎಲ್ಲಾ ನಾಯಕರಿಗೆ, ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಮೇಡಂ, ನಿಮ್ಮ ಮಾರ್ಗದರ್ಶನ ಹಾಗೂ ನೀವು ನನಗೆ ನೀಡಿದ ಅವಕಾಶಗಳಿಗಾಗಿ ನಾನು ನಿಮಗೆ ವೈಯುಕ್ತಿಕವಾಗಿ ಧನ್ಯವಾದ ಅರ್ಪಿಸುತ್ತೇನೆ. ನನ್ನ ಸಾರ್ವಜನಿಕ ಸೇವೆಯ ಜೀವನದಲ್ಲಿ ಹೊಸ ಅಧ್ಯಾಯನದ ಆರಂಭಕ್ಕೆ ನಿಮ್ಮ ಶುಭ ಹಾರೈಕೆಗಳು ನನಗಿದೆ ಎಂದು ಭಾವಿಸುತ್ತೇನೆ" ಎಂದು ತಿಳಿಸಿದ್ದಾರೆ.
ಸುಶ್ಮಿತಾ ದೇವ್ ಸಿಂಗ್ ಅವರು, ಹಿರಿಯ ಕಾಂಗ್ರೆಸ್ ನಾಯಕ ಸಂತೋಷ್ ಮೋಹನ್ ದೇವ್ ಅವರ ಪುತ್ರಿ. ಇವರು 2014ರಲ್ಲಿ ಸಿಲ್ಚಾರ್ನಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು.