ಇಟಾ, ಆ 16 (DaijiworldNews/PY): ಮೂರು ತಿಂಗಳ ಕಂದಮ್ಮನ ಮೇಲೆ ಅಪ್ರಾಪ್ತ ಬಾಲಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ಬಗ್ವಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮಗುವಿನ ತಾಯಿ ಎಮ್ಮೆಗಳನ್ನು ಕಟ್ಟಲು ಹೋಗಿದ್ದ ಸಂದರ್ಭ ಬಾಲಕ ಈ ಕೃತ್ಯವೆಸಗಿದ್ದಾನೆ. ತಾಯಿ ಮನೆಗೆ ವಾಪಾಸ್ಸಾದ ಸಂದರ್ಭ ಅಳುತ್ತಿದ್ದ ಮಗುವನ್ನು ಬಾಲಕ ಸಮಾಧಾನ ಮಾಡುತ್ತಿರುವುದನ್ನು ಗಮನಿಸಿದ್ದಾರೆ.
ಈ ವೇಳೆ ಮಗುವಿನ ಖಾಸಗಿ ಅಂಗಗಳಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆಪಾದಿತನ ಮೇಲೆ ಭಾರತೀಯ ದಂಡ ಸಂಹಿತೆಯ 376ನೇ ವಿಧಿ (ಅತ್ಯಾಚಾರ) ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಪಾದಿತ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ.