ಬೆಂಗಳೂರು, ಆ 15 (DaijiworldNews/SM): ಭಾರತ ಕೇವಲ ನೆರೆಯ ರಾಷ್ಟ್ರಗಳಿಂದ ಮಾತ್ರ ಭಯೋತ್ಪಾದನೆಯ ಆತಂಕ ಎದುರಿಸುವುದಲ್ಲ, ಬದಲಾಗಿ ಆಂತರಿಕ ಭಯೋತ್ಪಾದನೆಯ ಭೀತಿಯನ್ನು ಕೂಡ ಎದುರಿಸುತ್ತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಕಾರ್ಯಕ್ರವನ್ನುದ್ದೇಶಿಸಿ ಮಾತನಾಡಿದ ಸ್ಪೀಕರ್, ಮಾವೋವಾದಿಗಳ ರೂಪದಲ್ಲಿ, ನಕ್ಸಲರ ರೂಪದಲ್ಲಿ ಸಮಾಜ ಒಡೆಯುವ ಪ್ರಯತ್ನ ನಿರಂತರವಾಗಿ ನಡೆದಿದೆ. ಕೇವಲ ನೆರೆ ರಾಜ್ಯಗಳ ಭಯೋತ್ಪಾದಕರ ಆತಂಕ ಮಾತ್ರವಲ್ಲ, ಆತಂರಿಕವಾಗಿಯೂ ಆತಂಕವಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದೆ. ನಮ್ಮ ಹಿಂದಿನ ಸರ್ಕಾರಗಳ ತಪ್ಪಿನಿಂದಾಗಿ ನಾವು ಇನ್ನು ಬ್ರಿಟೀಷ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನೇ ಅನುಸರಿಸುತ್ತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು ಎಂದರು.