ನವದೆಹಲಿ,ಆ 15 (DaijiworldNews/HR): "ಸಂಸತ್ತಿನಲ್ಲಿ ವಿರೋಧಪಕ್ಷಗಳು ಎಷ್ಟು ಸಾಧ್ಯವೋ ಅಷ್ಟೂ ಕೆಟ್ಟದಾದ ನಡವಳಿಕೆಯನ್ನು ತೋರಿವೆ. ಪ್ರಜಾಪ್ರಭುತ್ವದ ಆಧಾರಸ್ತಂಭವನ್ನು ಹಾಳುಗೆಡವಲು ಇನ್ನೇನನ್ನೂ ಉಳಿಸಿಲ್ಲ" ಎಂದು ಕೇಂದ್ರ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಉಭಯ ಸದನಗಳಲ್ಲಿ ನೂತನ ಸಚಿವರನ್ನು ಪ್ರಧಾನಮಂತ್ರಿ ಪರಿಚಯಿಸುವುದು 70 ವರ್ಷದಿಂದ ಪಾಲಿಸುತ್ತ ಬಂದಿರುವ ಸಂಪ್ರದಾಯವಾಗಿದ್ದು, ಇದೇ ಮೊದಲ ಬಾರಿ ಪ್ರತಿಪಕ್ಷಗಳು ಅದಕ್ಕೂ ಅವಕಾಶ ನೀಡಲಿಲ್ಲ" ಎಂದರು.
ಇನ್ನು "ಪ್ರಜಾಪ್ರಭುತ್ವವು ತನ್ನದೇ ಆದ ಗೌರವ, ಶ್ರೀಮಂತಿಕೆ ಇದೆ. ವಿರೋಧಪಕ್ಷಗಳ ಸ್ಪರ್ಧೆ ಮತ್ತು ಸ್ಪರ್ಧಾತ್ಮಕ ರಾಜಕಾರಣಕ್ಕಾಗಿ ಅದು ಬಲಿಯಾಯಿತು. ವಿರೋಧಪಕ್ಷಗಳು ಸಹನೆಯ ಎಲ್ಲ ಮಿತಿಗಳನ್ನೂ ಮೀರಿದವು" ಎಂದು ಹೇಳಿದ್ದಾರೆ.