ಚಿತ್ರದುರ್ಗ, ಆ 15 (DaijiworldNews/PY): "ನೆಹರು ಹಾಗೂ ವಾಜಪೇಯಿ ಅವರ ಹೆಸರಿನಲ್ಲಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕಾಗಿದೆ. ಇಬ್ಬರು ನಾಯಕರನ್ನು ಅವಹೇಳನ ಮಾಡುವುದು ಸರಿಯಲ್ಲ" ಎಂದು ದಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಾಜಪೇಯಿ ಹಾಗೂ ನೆಹರು ಅವರದು ಮೇರು ವ್ಯಕ್ತಿತ್ವ. ಇಬ್ಬರು ನಾಯಕರ ಬಗ್ಗೆ ಮಾತು ಮಿತಿಮೀರುತ್ತಿದೆ. ಎರಡೂ ಕಡೆಯವರು ಇವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ರಾಜಕಾರಣಕ್ಕೆ ದೊಡ್ಡ ನಾಯಕರ ಹೆಸರು ಎಳೆದು ತರುವುದು ಸರಿಯಲ್ಲ" ಎಂದಿದ್ದಾರೆ.
"ಇಬ್ಬರ ಹೆಸರಿನಲ್ಲಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕಿದೆ. ಇಬ್ಬರು ನಾಯಕರ ಬಗ್ಗೆ ಮಾತು ಹೆಚ್ಚಾಗುತ್ತಿದೆ. ರಾಜಕಾರಣದಲ್ಲಿ ಇರುವವರು ಯಾರನ್ನೂ ಕೂಡಾ ಟೀಕೆ ಮಾಡಬಹುದು ಎನ್ನುವುದು ಸೂಕ್ತವಲ್ಲ" ಎಂದು ತಿಳಿಸಿದ್ದಾರೆ.
"ಖಾತೆ ಹಂಚಿಕೆ ಬಗ್ಗೆ ನನಗೆ ಅಸಮಾಧಾನವಿಲ್ಲ. ನಾನು ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ. 2024 ರಲ್ಲೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ" ಎಂದು ಹೇಳಿದ್ದಾರೆ.